ಆನ್‌ಲೈನ್‌ನಲ್ಲಿ PUBG ಆಡುತ್ತಿದ್ದ ಹುಡುಗರಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ಮೃತ್ಯು
ಮಥುರಾ: ಲಕ್ಷ್ಮಿ ನಗರದಲ್ಲಿನ ಮಥುರಾ-ಕಾಸ್‌ಗಂಜ್ ಸಿಂಗಲ್ ಟ್ರ್ಯಾಕ್‌ನಲ್ಲಿ ಇಬ್ಬರು ಬಾಲಕರು ಗೂಡ್ಸ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಹುಡುಗರು ಜನಪ್ರಿಯ ಆನ್‌ಲೈನ್ ಆಟವಾದ PUBG ಆಡುವುದರಲ್ಲಿ ಮಗ್ನರಾಗಿದ್ದರು.
ಎರಡೂ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಹಾನಿಗೊಳಗಾಗಿದ್ದರೆ, ಇನ್ನೊಂದರಲ್ಲಿ PUBG ಇನ್ನೂ ಚಾಲನೆಯಲ್ಲಿದೆ ಎಂದು ಜಮುನಾಪರ್ ಪೊಲೀಸ್ ಠಾಣೆಯ (SHO) ಶಶಿ ಪ್ರಕಾಶ್ ಸಿಂಗ್ ಹೇಳಿದ್ದಾರೆ.
ಮೃತರನ್ನು 14 ವರ್ಷದ ಗೌರವ್ ಕುಮಾರ್ ಮತ್ತು ಕಪಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ 10ನೇ ತರಗತಿಯ ವಿದ್ಯಾರ್ಥಿಗಳಾಗಿದ್ದರು. ಬೆಳಗ್ಗೆ 7 ಗಂಟೆ ಸುಮಾರಿಗೆ ರೈಲು ಹಳಿ ಮೇಲೆ ಶವ ಬಿದ್ದಿರುವ ಬಗ್ಗೆ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.





