May 10, 2026

ವಿಟ್ಲ: ಆಸ್ತಿಗಾಗಿ ಹೆತ್ತ ತಾಯಿಗೆ ಬೆದರಿಸಿ ಹಲ್ಲೆ ನಡೆಸಿ ಪರಾರಿಯಾದ ಮಗ: ಪ್ರಕರಣ ದಾಖಲು

0
IMG-20230325-WA0064.jpg

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆಸ್ತಿಯಲ್ಲಿ ಪಾಲುಕೊಡುವಂತೆ ಒತ್ತಾಯಿಸಿ ಹೆತ್ತ ತಾಯಿಗೆ ಬೆದರಿಸಿ ಹಲ್ಲೆ ಮಾಡಿ ಮಗ ಪರಾರಿಯಾದ ಘಟನೆ ನಡೆದಿದೆ.

ಇಡ್ಕಿದು ಗ್ರಾಮದ ನಾರಾಯಣ ಗೌಡ ಎಂಬುವವರ ಹಿರಿಯ ಪುತ್ರ ಚೇತನ್‌ ಕುಮಾರ್ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮನೆಯ ಅಡಿಗೆಕೋಣೆಯಿಂದ ಅಮ್ಮ ರೋಹಿಣಿ ಅಳುವ ಶಬ್ದ ಕೇಳಿಬರುತ್ತಿತ್ತು. ತಕ್ಷಣ ಅಡುಗೆ ಕೋಣೆಗೆ ಓಡಿಹೋದಾಗ ಅಲ್ಲಿ ತಾಯಿ ರೋಹಿಣಿಯನ್ನು ಚೇತನ್‌ ಅವರ ತಮ್ಮ ಸಚಿನ್‌ ಎಂಬಾತನು ತಲೆ ಕೂದಲು ಹಿಡಿದು, ಮುಖಕ್ಕೆ ಕೈಯಿಂದ ಹೊಡೆಯುತ್ತಾ, ನನಗೆ ಜಾಗದಲ್ಲಿ ಪಾಲುಕೊಡಿ, ಇಲ್ಲದಿದ್ದರೆ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಹೇಳುತ್ತಿದ್ದನು.

ಇನ್ನು ತಕ್ಷಣ ಇದನ್ನು ತಡೆಯಲು ಚೇತನ್‌ ಮುಂದಾದಾಗ ಸಚಿನ್ ಅಲ್ಲೇ ಇದ್ದ ಚೂರಿಯಿಂದ ಅಮ್ಮನಿಗೆ ಚುಚ್ಚಲು ಮುಂದಾಗಿದ್ದಾನೆ. ಬಳಿಕ ಚೇತನ್‌ ಚೂರಿಯನ್ನು ಕಸಿಯುತ್ತಿದ್ದಂತೆ ಅಡುಗೆ ಕೋಣೆಯಲ್ಲಿದ್ದ ಕಲ್ಲನ್ನು ತೆಗೆದು ಚೇತನ್‌ ತಲೆಯ ಹಿಂಬದಿಗೆ ಹೊಡೆದು ಕೈಗೆ ಕಚ್ಚಿ ಓಡಿಹೋಗಿದ್ದಾನೆ.

ಗಾಯಗೊಂಡ ತಾಯಿ ರೋಹಿಣಿ ಹಾಗೂ ಚೇತನ್‌ರವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!