March 11, 2026

ಪಡುಬಿದ್ರೆ: ಬೈಕ್‌ ಮತ್ತು ಟ್ಯಾಂಕರ್‌ ನಡುವೆ ಅಪಘಾತ: ಸವಾರ ಮೃತ್ಯು, ಮತ್ತೋರ್ವ ಗಂಭೀರ

0
IMG-20230325-WA0062.jpg

ಪಡುಬಿದ್ರೆ: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ 66ರ ಉಚ್ಚಿಲದಲ್ಲಿ ಹಿಂಬದಿಯಿಂದ ಬಂದ ಟ್ಯಾಂಕರ್‌ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ಟ್ಯಾಂಕರ್ ಮುಂದಿನಿಂದ ತೆರಳುತ್ತಿದ್ದ ಪಲ್ಸರ್‌ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ.

ಇನ್ನು ಮೃತಪಟ್ಟ ಸವಾರನ ಗುರುತು ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆ. ಸಿ ಪೂವಯ್ಯ ಪುರುಷೋತ್ತಮ್ ಪಡುಬಿದ್ರಿ ಠಾಣಾಧಿಕಾರಿ ಭೇಟಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!