May 10, 2026

ಬಂಟ್ವಾಳ: ಹಿಂದುತ್ವದ ಹೋರಾಟ ಮಾಡಿ, ಆದರೆ ಬಡ ಮಕ್ಕಳನ್ನು ಜೈಲಿಗೆ ಕಳಿಸುವ ಕೆಲಸ ಮಾಡಬೇಡಿ: ಸರ್ಕಾರದ ವಿರುದ್ದ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

0
IMG-20230325-WA0068.jpg

ಬಂಟ್ವಾಳ: ಹಿಂದುತ್ವದ ಹೋರಾಟ ಮಾಡಿ ಆದರೆ ಬಡ ಮಕ್ಕಳನ್ನು ಜೈಲಿಗೆಕಳಿಸುವ ಕೆಲಸ ಮಾಡಬೇಡಿ. ಮಕ್ಕಳು ಭಯೋತ್ಪಾದಕರಾಗಬೇಕು ಎಂದರೆ ಬಿಜೆಪಿಗೆ ಮತಹಾಕಿ, ಮಕ್ಕಳು ವೈದ್ಯರು, ಇಂಜಿನಿಯರ್ ಆಗಬೇಕಾದರೆ ಕಾಂಗ್ರೆಸ್ ಗೆ ಮತಹಾಕಿ ಎಂದು ವಿಧಾನ‌ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಬಿಸಿರೋಡಿನ ನೆಹರು ನಗರದಲ್ಲಿ 2023 ರ ವಿಧಾನ ಸಭಾ ಚುನಾವಣಾ ಪೂರ್ವಭಾವಿಯಾಗಿ ನಡೆಯುವ ಕರಾವಳಿ ಪ್ರಜಾಧ್ವನಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮಾಡೆಲ್ ಅನ್ನು ಮೋದಿ, ಅಮಿತ್ ಶಾ ಕಲಿಯಬೇಕಾಗಿದೆ, ಹೊರತು ಗುಜರಾತ್ ಮಾಡೆಲ್ ಅನ್ನು ಅಲ್ಲ ಎಂದರು.

ಮಾತೆತ್ತಿದ್ದರೆ ಗುಜರಾತ್ ಮಾಡೆಲ್, ನಾವು ಉಳ್ಳಾಲ ಒಂದೇ ವಿಧಾನ ಸಭಾ ಕ್ಷೇತ್ರದಲ್ಲಿ 5 ಮೆಡಿಕಲ್ ಕಾಲೇಜು ಮಾಡಿದ್ದೇವೆ , ಇದು ನಮ್ಮ ಮಾಡೆಲ್ ಇದನ್ನು ಬಿಜೆಪಿಯವರು ನೋಡಬೇಕಾಗಿದೆ. ರಾಷ್ಟಭಕ್ತಿ ದೇಶಭಕ್ತಿ ವಿಚಾರದಲ್ಲಿ ಬಿಜೆಪಿಯವರು ಕಾಂಗ್ರೆಸ್ ಗೆ ಬುದ್ದಿ ಹೇಳಬೇಕಾದ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಸಮಾಜದ ಕಟ್ಟಕಡೆಯ ಜನಸಾಮಾನ್ಯರ ಕಣ್ಣೀರಿರೊರಸುವ ಕಾರ್ಯ ಮಾಡಬೇಕು ಹೊರತು,ಅಂಬಾನಿ, ಆದಾನಿ ಅವರ ಹೊಟ್ಟೆ ತುಂಬಿಸುವ ಕೆಲಸ ಮಾಡುವುದು ಅಲ್ಲ..ಕಳ್ಳರಿಗೆ ಕಳ್ಳ ಎಂದು ಹೇಳಿದರೆ ರಾಹುಲ್ ಗಾಂಧಿ ಮೇಲೆ ಕೇಸ್ ಹಾಕಿದರೆ ಯಾರು ಹೆದರುತ್ತಾರೆ ಎಂದು ಅವರು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!