ಕಂಬಳಿಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ
ಕೇರಳ: ಇಡುಕ್ಕಿ ಜಿಲ್ಲೆಯ ತೋಡುಪುಳ ಎಂಬಲ್ಲಿ ಹಾಸಿಗೆ ಅಡಿಯಲ್ಲಿ ಕಂಬಳಿಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಕೊಲೆಯಾದ ಮಹಿಳೆ ಸ್ಥಳೀಯ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿ ಪಿ.ಜೆ.ವಲ್ಸಮ್ಮ ಅಲಿಯಾಸ್ ಅನುಮೋಲ್ 27 ಎಂದು ಗುರುತ್ತಿ ಸಲಾಗಿದೆ.
ಕೊಲೆ ಪ್ರಕರಣದ ಆರೋಪಿ ಎಂದು ಶಂಕಿಸಲಾಗಿರುವ ಆಕೆಯ ಪತಿ ವಿಜೇಶ್ ಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಶವವು ಐದು ದಿನಗಳಷ್ಟು ಹಳೆಯದು ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




