February 4, 2026

ಪುತ್ತೂರು: ಐ.ಬಿ ವೆಲ್ಫೇರ್ ಅಸೋಸಿಯೇಶನ್ ನಿಂದ ರಮಝಾನ್ ಕಿಟ್ ವಿತರಣೆ

0
IMG-20230323-WA0041.jpg

ಪುತ್ತೂರು, ಮಾ.23: ಫಿಲೋಮಿನಾ ಕಾಲೇಜು ಪುತ್ತೂರು ಇದರ 2014-17ನೇ ಸಾಲಿನ ಹಳೆ ವಿದ್ಯಾರ್ಥಿಗಳು ರಚಿಸಿರುವ ಐ.ಬಿ ವೆಲ್ಫೇರ್ ಅಸೋಸಿಯೇಶನ್ ಇದರ ವತಿಯಿಂದ ಆಹಾರದ ಕಿಟ್ ವಿತರಣಾ ಕಾರ್ಯಕ್ರಮವು ನಗರದ ಎಂ.ಟಿ ರಸ್ತೆಯಲ್ಲಿರುವ ಕೇಂದ್ರ ಜುಮಾ ಮಸೀದಿಯ ಮದ್ರಸಾ ಹಾಲ್ ನಲ್ಲಿ ಜರಗಿತು.

ಸೈಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಃ ನೆರವೇರಿಸುವುದರ ಮೂಲಕ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಂಡದ ಸದಸ್ಯರು ಸುಮಾರು 60 ಅರ್ಹ ಫಲಾನುಭವಿಗಳನ್ನು ಗುರುತಿಸಿ ಕಿಟ್ ವಿತರಿಸಿದರು.

ಈ ಸಂದರ್ದಲ್ಲಿ ಐ.ಬಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಬಾತಿಶಾ ಆತೂರು, ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ, ಪುತ್ತೂರು ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ಜೆಡಿಎಸ್ ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ, ಪುತ್ತೂರು ಎಸ್ ಡಿಪಿಐ ವಿಧಾನಸಭಾ ಸಮಿತಿ ಅಧ್ಯಕ್ಷ ಅಬೂಬಕರ್ ಸಿದ್ದೀಕ್, ಪುತ್ತೂರು ನಗರ ಸಭೆ ಸದಸ್ಯ ಮಹಮ್ಮದ್ ರಿಯಾಝ್, ಶಬೀರ್ ಕೆಂಪಿ, ಅರ್ಶದ್ ದರ್ಬೆ, ಮೋನು ಬಪ್ಪಳಿಗೆ ಹಾಗೂ ಐ.ಬಿ ವೆಲ್ಫೇರ್ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಮಹಮ್ಮದ್ ಸಲಿತ್, ಪ್ರ.ಕಾರ್ಯದರ್ಶಿ ನವಾಝ್ ಬಿ.ಸಿ, ಉಪಾದ್ಯಕ್ಷ ಆಶೀಕ್ ಕಲ್ಲರ್ಪೆ, ತಂಡದ ಸದಸ್ಯರಾದ ಮಂಸೂರ್, ನೌಶಾದ್, ಮುಸ್ತಫಾ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!