November 21, 2024

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿ ಹಾಡಿದ್ದ ಪಾಪ್ ತಾರೆ ನಿಗೂಢ ಸಾವು

0

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿ ಹಾಡುಗಳ ಬರೆದು ಹಾಡಿದ್ದ 35 ವರ್ಷದ ಪಾಪ್ ತಾರೆ ಡಿಮಾ ನೋವಾ ನಿಗೂಢ ಸಾವಿಗೀಡಾಗಿದ್ದಾರೆ.

ರಷ್ಯಾದ ಪಾಪ್ ತಾರೆ ದಿಮಾ ನೋವಾ ಹಠಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದ್ದು, ನ್ಯೂಸ್‌ವೀಕ್ ಪ್ರಕಾರ, ಡಿಮಾ ಪಾಪ್ ಗುಂಪಿನ ಸಂಸ್ಥಾಪಕರಾಗಿದ್ದರು.

ಅವರ ಹಾಡುಗಳು ರಷ್ಯಾದಲ್ಲಿ ಯುದ್ಧ-ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಜನಪ್ರಿಯವಾಗಿದ್ದವು.

ಕ್ರೀಮ್ ಸೋಡಾ ಗುಂಪಿನ ಸಂಸ್ಥಾಪಕರಾದ ಡಿಮಾ ನೋವಾ ತಮ್ಮ ಹಾಡಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 1.3 ಬಿಲಿಯನ್ ಡಾಲರ್ ಅರಮನೆಯವನ್ನು ಟೀಕಿಸಿದ್ದಾರೆ. ಇದೇ “ಆಕ್ವಾ ಡಿಸ್ಕೋ” ಹಾಡಿನಲ್ಲಿ ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಿ ಆಗಾಗ್ಗೆ ಪ್ರದರ್ಶನ ನೀಡುತ್ತಿದ್ದರು.

ಇದಕ್ಕೆ “ಆಕ್ವಾ ಡಿಸ್ಕೋ ಪಾರ್ಟಿ” ಎಂದೇ ಕರೆಯಲಾಗುತ್ತಿತ್ತು. ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಲು ಆಗಾಗ್ಗೆ ಈ ಹಾಡನ್ನು ಹಾಡಲಾಗುತ್ತಿತ್ತು.

Leave a Reply

Your email address will not be published. Required fields are marked *

error: Content is protected !!