December 19, 2025

ಮೆಲ್ಕಾರ್: ಇತ್ತಂಡದ ನಡುವೆ ಮಾರಾಮಾರಿ-ವೀಡಿಯೋ ವೈರಲ್:
ಬಂಟ್ವಾಳ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲು

0
image_editor_output_image-1781575568-1637407424926

ಬಂಟ್ವಾಳ: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್ ನಲ್ಲಿ ರಸ್ತೆ ಬದಿಯಲ್ಲಿ ಯುವಕರ ಎರಡು ತಂಡಗಳು ಹೊಡೆದಾಟ ನಡೆಸಿ ದ ವಿಡಿಯೋ ವೈರಲ್ ಆಗಿದ್ದು ಘಟನೆಯ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪೋಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೆಲ್ಕಾರ್ ಸಾರ್ವಜನಿಕ ಸ್ಥಳದಲ್ಲಿ ಯುವಕರ ಎರಡು ತಂಡಗಳು ವೈಯಕ್ತಿಕ ವಿಚಾರಕ್ಕೆ ಗಲಾಟೆ ನಡೆದ ವಿಡಿಯೋ ಇದೀಗ ವೈರಲ್ ಆಗಿದೆ. ಕಳೆದ ಕೆಲ ದಿನಗಳ ಹಿಂದೆ ಬಂಟ್ವಾಳದಲ್ಲಿ ನಡೆದ ಮೆಹಂದಿ ಕಾರ್ಯಕ್ರಮ ವೊಂದರಲ್ಲಿ ಸಂತೋಷ್ ಎಂಬವರಿಗೆ ಅವಿನಾಶ್ ಎಂಬವರು ಹಲ್ಲೆ ನಡೆಸಿದ್ದು ಇದರ ರಾಜಿ ಪಂಚಾಯತಿ ಗಾಗಿ ಮೆಲ್ಕಾರ್ ಗೆ ಎರಡು ತಂಡಗಳು ಬಂದು ಸೇರಿದ್ದವು.

ಇದೇ ವಿಚಾರ ವಾಗಿ ಮಾತಿಗೆ ಮಾತಿಗೆ ಬೆಳೆದು ರಾಜಿ ಪಂಚಾಯಿತಿಗೆ ಮುರಿದು ಪರಸ್ಪರ ಮರದ ಸೊಂಟೆಯಿಂದ ಹಾಗೂ ಸೋಡ ಬಾಟಲಿಯಿಂದ ಹೊಡೆದಾಡಿಕೊಂಡಿದ್ದಾರೆ.
ಬಳಿಕ ಒಂದು ತಂಡ ಒಮ್ನಿ ಕಾರಿನಲ್ಲಿ ಕುಳಿತು ಅಲ್ಲಿಂದ ಕಾಲ್ಕಿತ್ತಿದೆ.
ಈ ಘಟನೆ ಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಅಗಮಿಸಿದ ಬಂಟ್ವಾಳ ಪೋಲೀಸರನ್ನು ನೋಡಿ ಇನ್ನೊಂದು ತಂಡ ಕೂಡ ಪರಾರಿಯಾಗಿತ್ತು.

ಈ ಘಟನೆಯ ಬಗ್ಗೆ ಎರಡು ತಂಡಗಳು ಯಾವುದೇ ದೂರನ್ನು ಈ ವರಗೆ ಪೋಲೀಸ್ ಠಾಣೆಗೆ ನೀಡಿಲ್ಲ.
ಸಾರ್ವಜನಿಕ ಸ್ಥಳ ದಲ್ಲಿ ಗಲಾಟೆ ಮಾಡಿದ್ದಲ್ಲದೆ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪ್ರಕರಣವಾಗಿದ್ದರಿಂದ ಪೋಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!