ಮಂಗಳೂರು ಬಂದರಿಗೆ ಆಗಮಿಸಿದ ‘ಸಿಲ್ವರ್ ಸ್ಪಿರಿಟ್’ ಐಷಾರಾಮಿ ವಿಹಾರ ನೌಕೆ
ಮಂಗಳೂರು : ಪ್ರಸ್ತುತ ಋತುವಿನ ಆರನೇ ಐಷಾರಾಮಿ ವಿಹಾರ ನೌಕೆ ‘ಸಿಲ್ವರ್ ಸ್ಪಿರಿಟ್’ ಇಂದು ಕಡಲ ನಗರಿ ಮಂಗಳೂರಿಗೆ ಆಗಮಿಸಿತು.
ಎನ್‌ಎಂಪಿಎ ಬಂದರಿಗೆ ಆಗಮಿಸಿದ ಐಷರಮಿ ಹಡಗನ್ನು ಬಂದರು ಪ್ರಾಧಿಕಾರ ಅಧ್ಯಕ್ಷರು ಮತ್ತು ಆಡಳಿತ ವರ್ಗ ಸ್ವಾಗತಿಸಿತು.
497 ಪ್ರಯಾಣಿಕರು ಮತ್ತು 411 ಸಿಬ್ಬಂದಿಯನ್ನು ಹೊತ್ತುಕೊಂಡು ಕೊಚ್ಚಿಯಿಂದ ಈ ಹಡಗು ಬಂದಿದ್ದು, ಹಡಗಿನ ಒಟ್ಟಾರೆ ಉದ್ದವು 210.70 ಮೀಟರ್‌ಗಳಾಗಿದ್ದು, 39,444 ಒಟ್ಟು ಟನ್‌ಗಳನ್ನು ಸಾಗಿಸುವ ಸಾಮರ್ಥ್ಯ ಮತ್ತು 6.60 ಮೀಟರ್‌ಗಳ ಡ್ರಾಫ್ಟ್ ಹೊಂದಿದೆ.




