May 11, 2026

ಗಲಾಟೆ ಬಿಡಿಸಲು ಬಂದ ಸಂಬಂಧಿಯನ್ನೇ ಚಾಕುವಿನಿಂದ ಇರಿದು ಕೊಲೆ

0
image_editor_output_image1958338057-1679379699059.jpg

ಕೋಲಾರ: ಗಂಡ-ಹೆಂಡತಿ ನಡುವಿನ ಗಲಾಟೆಯಲ್ಲಿ ಪ್ರಶ್ನೆ ಮಾಡಿದ ಹೆಂಡತಿಯ ಮೈದುನನ್ನೇ ಚಾಕು ಇರಿದು ಕೊಲೆ ಮಾಡಿದ ಘಟನೆ ಕೊಲಾರದ ಜಂಬೂ ಬಜಾರ್‌ನಲ್ಲಿ ಸೋಮವಾರ ನಡೆದಿದೆ.

ಘಟನೆಯಲ್ಲಿ ಮತ್ತೋರ್ವ ಸಂಬಂಧಿಯ ಕೊಲೆ ಯತ್ನ ನಡೆದಿದ್ದು, ಗಾಯಗೊಂಡ ವ್ಯಕ್ತಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಂತಿ ನಗರದ ನಿವಾಸಿ ತಾಜ್ ಮೃತಪಟ್ಟಿದ್ದು, ನ್ಯಾಮೊದ್ದಿ ಮೊಹಲ್ಲಾ ನಿವಾಸಿ ಜಫ್ರುಲ್ಲಾ ಗಾಯಗೊಂಡಿದ್ದಾರೆ.

ಚಾಕು ಇರಿತಕ್ಕೊಳಗಾದ ಇಬ್ಬರೂ ಆರೋಪಿಯ ಸಂಬಂಧಿಕರೇ ಆಗಿದ್ದಾರೆ. ಆರೋಪಿ ಗಲ್ ಪೇಟೆ ನಿವಾಸಿ ಫಯಾಸ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಹತ್ತು ವರ್ಷದ ಹಿಂದೆ ತಾಜ್‍ನ ನಾದಿನಿಯನ್ನ ಮದುವೆಯಾಗಿದ್ದ ಫಯಾಸ್, ಇತ್ತೀಚೆಗೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದ.

ಇದರಿಂದ ಬೇಸತ್ತು ಮೂರು ತಿಂಗಳ ಹಿಂದೆ ಆರೋಪಿಯ ಪತ್ನಿ ಮುಮ್ತಾಜ್ ತವರು ಮನೆ ಸೇರಿದ್ದಳು.

ಸೋಮವಾರ ಪತ್ನಿಯೊಂದಿಗೆ ಮಾತನಾಡಲು ಬಂದಿದ್ದ ಆರೋಪಿ ಗಲಾಟೆ ಆರಂಭಿಸಿದ್ದ. ಗಲಾಟೆ ತರಾರಕಕ್ಕೇರಿ ಮೈದುನನ್ನೇ ಹತ್ಯೆ ಮಾಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!