May 11, 2026

ತುಮಕೂರಿನಲ್ಲಿ ರಸ್ತೆ ಅಪಘಾತ: ಸುಳ್ಯದ ಯುವಕ ಮೃತ್ಯು

0
image_editor_output_image940495386-1679376627586.jpg

ಸುಳ್ಯ: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕ ಮೃತಪಟ್ಟ ಘಟನೆ ನಡೆದಿದೆ.

ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ಎಂಬವರ ಪುತ್ರ ಪ್ರಜ್ವಲ್ ಕೇರ್ಪಳ(25) ಮೃತ ಯುವಕ. ಪ್ರಜ್ವಲ್ ಪಾವಗಡದಲ್ಲಿ ಟೋಲ್ ಸೂಪರ್ ವೈಸರ್ ಆಗಿ ಕೆಲಸದಲ್ಲಿದ್ದರು.

ಭಾನುವಾರ ಬೈಕ್ ನಲ್ಲಿ ತೆರಳುತ್ತಿದ್ದಾಗ ಟೋಲ್ ಗೇಟ್ ನಿಂದ ಸ್ವಲ್ಪ ದೂರದಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪ್ರಜ್ವಲ್ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!