ನಾಳೆ ಒಕ್ಕೆತ್ತೂರು ನೂರುಲ್ ಇಸ್ಲಾಂ ಮದ್ರಸ ಪ್ರಥಮ ಮಹಡಿಯ ನೂತನ ಕಟ್ಟಡದ ಉದ್ಘಾಟನೆ
ವಿಟ್ಲ: ಒಕ್ಕೆತ್ತೂರು ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ನೂರುಲ್ ಇಸ್ಲಾಂ ಮದರಸ ಇದರ ಪ್ರಥಮ ಮಹಡಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಇದೇ ನ.21ರಂದು ಸಂಜೆ 6.30ಕ್ಕೆ ನಡೆಯಲಿದೆ.
ಕೆ.ಎ ಮಹಮೂದುಲ್ ಫೈಝಿ ಓಲೆಮುಂಡೋವು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ನೂರುಲ್ ಇಸ್ಲಾಂ ಮದರಸ ಕಮಿಟಿಯ ಅಧ್ಯಕ್ಷ ಇಸ್ಮಾಯಿಲ್ ಸುಪರ್ ಲೈಮ್ ಮತ್ತು ಕಾರ್ಯದರ್ಶಿ ಅಶ್ರಪ್ ಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





