May 11, 2026

ಮಂಗಳೂರು: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ವಂಚನೆ: ಆರೋಪಿ ಪೊಲೀಸರ ವಶಕ್ಕೆ

0
IMG-20230320-WA0015.jpg

ಮಂಗಳೂರು: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿಕೊಂಡು ಒಳ್ಳೆಯ ಲಾಭಾಂಶವನ್ನು ಪಡೆಯಬಹುದು ಎಂದು ಹಲವಾರು ಮಂದಿಗೆ ಕೋಟ್ಯಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳದ ಮಲಪ್ಪುರ ಜಿಲ್ಲೆಯ ಚಕ್ಕರತೋಡಿ ನಿವಾಸಿ ಹಂಝಾ ಸಿ.ಟಿ. ಎಂದು ಗುರುತಿಸಲಾಗಿದೆ.

ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಕೋಟ್ಯಂತರ ರೂ. ಹಣ ಲಾಭ ಗಳಿಸಬಹುದು ಎಂದು ಹಲವಾರು ಮಂದಿಯಿಂದ ಹಣವನ್ನು ಹೂಡಿಕೆ ಮಾಡಿಕೊಂಡು ತಿಂಗಳಿಗೆ 25 % ಲಾಭಾಂಶವನ್ನು ನೀಡುವುದಾಗಿ ಮಂಗಳೂರು ಕಣ್ಣೂರು ಪರಿಸರದ ನಿವಾಸಿಯಿಂದ ಹಾಗೂ ಇತರ ಸಾರ್ವಜನಿಕರಿಂದ ಹಮವನ್ನು ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿಸಿಕೊಂಡು ಲಾಭಾಂಶವನ್ನು ನೀಡದೇ ವಂಚನೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!