ವಿಟ್ಲ: ಇಡ್ಕಿದು ಸೊಸೈಟಿಯಿಂದ ಪಡೆದ ಸಾಲ ಕಟ್ಟುವಂತೆ ನೋಟಿಸ್: ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕೃಷಿಕ
ವಿಟ್ಲ: ಸಹಕಾರಿ ಸಂಸ್ಥೆಯ ಸಾಲ ಬಾಧೆ ತಾಳಲಾರದೆ ರೈತರೊಬ್ಬರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇಡ್ಕಿದುವಿನಲ್ಲಿ ಮಾ.19ರಂದು ನಡೆದಿದೆ.
ಇಡ್ಕಿದು ಬಂಗೇರಕೋಡಿ ನಿವಾಸಿ ವೀರಪ್ಪ ಗೌಡ (55) ಮೃತ ವ್ಯಕ್ತಿಯಾಗಿದ್ದಾರೆ.
ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಸಾಲವನ್ನು ತೆಗೆದುಕೊಂಡಿದ್ದು, ಸಾಲವನ್ನು ಮರುಪಾವತಿಸುವಂತೆ ಸೊಸೈಟಿಯಿಂದ ನೋಟೀಸ್ ಬಂದಿರುವುದಲ್ಲದೇ ಹಲವು ಬಾರಿ ಸೊಸೈಟಿಯ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಸಾಲವನ್ನು ಕಟ್ಟದಿದ್ದರೆ ಜಮೀನು ಹರಾಜು ಮಾಡುತ್ತಿದ್ದುದರಿಂದ ಮಾನಸಿಕವಾಗಿ ನೊಂದು ಮನೆಯ ಪಕ್ಕದ ಜಾಗದಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪುತ್ರ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.