ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಮನೆಯಲ್ಲಿದ್ದ ಸಿರಪ್, ಮಾತ್ರೆ ಕೊಟ್ಟ ಪೋಷಕರು: ಮಗು ಸಾವು
ಬ್ರಹ್ಮಾವರ: ಜ್ವರದಿಂದ ಬಳಲುತ್ತಿದ್ದ ಮಗುವಿಗೆ ವಾರದ ಹಿಂದೆ ತಂದಿಟ್ಟಿದ್ದ ಹಾಲಿನೊಂದಿಗೆ ಸಿರಪ್ ಮಾತ್ರೆ ಸೇವಿಸಿದ ಎರಡೂವರೆ ವರ್ಷದ ಮಗು ಮೃತಪಟ್ಟ ಘಟನೆ ವರದಿಯಾಗಿದೆ.
ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ಹೆಬ್ಬಾರು ಬೆಟ್ಟು ಎಂಬಲ್ಲಿ ಸಕಲೇಶಪುರದ ಎನ್.ಆರ್ ವಿವೇಕ್ ಎಂಬವರಿಗೆ ಸಂಬಂಧಿಸಿದ ಕೃಷಿ ಫಾರ್ಮ್ ನ ಬಿಡಾರದಲ್ಲಿ ವಾಸಮಾಡಿಕೊಂಡಿರುವ ರಾಜ್ ಕುಮಾರ್ ಎಂಬವರ ಎರಡೂವರೆ ವರ್ಷದ ಮಗು ಮೃತಪಟ್ಟಿದೆ. ಇವರು ಮೂಲತಃ ಬಿಹಾರದವರೆಂದು ತಿಳಿದುಬಂದಿದೆ.
ರಾಜ್ ಕುಮಾರ್ ಅವರ ಮಗಳಿಗೆ ಜ್ವರ, ಹೊಟ್ಟೆನೋವು ಕಾಣಿಸಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಪೇತ್ರಿಯ ಪ್ರಾಥಮಿಕ ಆಸ್ಪತ್ರೆಯ ವೈಧ್ಯರ ಬಳಿ ಹೋದಾಗ ವೈದ್ಯರು ಸಿರಪ್ ನೀಡಿದ್ದರು.
ಅಲ್ಲದೇ ಅವಳಿಗೆ 10 ದಿನಗಳ ಹಿಂದೆ ಹುಷಾರಿಲ್ಲದೇ ಇದ್ದಾಗ ನೀಡಿದ ಉಳಿದ ½ ಮಾತ್ರೆ ತೆಗೆದುಕೊಳ್ಳುವಂತೆ ಸೂಚಿಸಿದ್ದರು.




