ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ ತಂದೆ
ಬೆಂಗಳೂರು: ತಂದೆಯೊಬ್ಬ ತನ್ನ ಮಗಳನ್ನು ಬರ್ಬರವಾಗಿ ಕೊಲೆಗೈದ ಘಟನೆ ಕೊಡಿಗೆಹಳ್ಳಿಯ ಧನಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.
ಆಶಾ (32) ಕೊಲೆಯಾದ ಮಗಳು. ಈಕೆಯನ್ನು ತಂದೆ ರಮೇಶ್ (60) ಕೊಲೆ ಮಾಡಿದ್ದಾರೆ.
ಮದುವೆಯಾಗಿದ್ದ ಆಶಾ ಗಂಡನಿಂದ ದೂರವಾಗಿದ್ದು, ತಂದೆ ಮನೆಯಲ್ಲೇ ಉಳಿದುಕೊಂಡಿದ್ದಳು.
ಅಲ್ಲದೇ ತಂದೆ, ತಾಯಿ, ತಂಗಿಗೆ ಕಿರುಕುಳ ನೀಡುತ್ತಿದ್ದಳು. ಇದೇ ಕಾರಣಕ್ಕೆ ಬುಧವಾರ ರಾತ್ರಿ ಮನೆ ಮಂದಿ ಜೊತೆ ಜಗಳವಾಗಿತ್ತು.




