September 1, 2026

ಬೆಳ್ತಂಗಡಿ: ಕೊಡಪಾನ ಮೇಲಕ್ಕೆತ್ತಲು ಹೋಗಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

0
IMG-20230316-WA0023.jpg

ಬೆಳ್ತಂಗಡಿ: ಬಾವಿಗೆ ಬಿದ್ದ ಕೊಡವನ್ನು ಮೇಲಕ್ಕೆತ್ತಲು ಬಾವಿಗೆ ಇಳಿದಿದ್ದ ವ್ಯಕ್ತಿಯೋರ್ವ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನಲ್ಲಿ ವರದಿಯಾಗಿದೆ.

ಪ್ರವೀಣ್ ಮೃತಪಟ್ಟ ದುರ್ದೈವಿ.

ಮಾರ್ಚ್ 15 ರಂದು ವಸಂತಿ ಎಂಬವರ ಮನೆ ಬಾವಿಗೆ ಬಿದ್ದಿದ್ದ ಕೊಡಪಾನ ಮೇಲಕ್ಕೆತ್ತಲು ಬಾವಿಗೆ ಇಳಿದಿದ್ದರು. ಪ್ರವೀಣ್ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದರು. ಬಳಿಕ ಕೊಡಪಾನವನ್ನು ಮೇಲಕ್ಕೆ ಕಳುಹಿಸಿದ್ದರು. ಬಳಿಕ ಅದೇ ಹಗ್ಗವನ್ನು ಬಳಸಿಕೊಂಡು ಅವರು ಮೇಲಕ್ಕೇರಲು ಪ್ರಯತ್ನಿಸಿದ್ದಾರೆ. ಆದರೆ, ಅರ್ಧಕ್ಕೆ ತಲುಪಿದ ವೇಳೆ ಕೈಜಾರಿ ಬಾವಿಗೆ ಬಿದ್ದಿದ್ದಾರೆ.

ನಂತರ ಅಗ್ನಿ ಶಾಮಕ ದಳದವರು ಬಂದು ಪ್ರವೀಣ್ ರವರನ್ನು ಮೇಲಕ್ಕೇತ್ತಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!