ಭೂಕಂಪದಿಂದ ತತ್ತರಿಸಿರುವ ಟರ್ಕಿಯಲ್ಲಿ ನೆರೆ: 12 ಜನರು ಮೃತ್ಯು
ಅಂಕಾರಾ: ಭೂಕಂಪದಿಂದ ತತ್ತರಿಸಿರುವ ಟರ್ಕಿಯಲ್ಲಿ ನೆರೆ ಹಾವಳಿಯಿಂದಾಗಿ 12 ಜನರು ಮೃತಪಟ್ಟಿದ್ದಾರೆ.
ಆಗ್ನೇಯ ಟರ್ಕಿಯ ಆದಿಯಾಮನ್, ಸ್ಯಾನ್ಲಿಯುರ್ಫಾ ಪ್ರಾಂತ್ಯದಲ್ಲಿ ಕಳೆದ 3 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ ಎಂದು ಮಾಧ್ಯಮಗಳ ವರದಿ ಮಾಡಿವೆ. ಟುಟ್ ಪಟ್ಟಣದಲ್ಲಿ ಭೂಕಂಪದಿಂದ ಬದುಕುಳಿದಿದ್ದವರು ಕಂಟೇನರ್‌ನಲ್ಲಿ ವಾಸವಾಗಿದ್ದರು. ಪ್ರವಾಹಕ್ಕೆ ಕಂಟೇನರ್ ಕೊಚ್ಚಿ ಹೋಗಿದ್ದು 10 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಆದಿಯಾಮನ್‌ನಲ್ಲಿ ಪ್ರವಾಹದಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಟರ್ಕಿಯ ಗೃಹ ಸಚಿವ ಸುಲೇಮನ್ ಸೊಯ್ಲು ಅವರು ತಿಳಿಸಿದ್ದಾರೆ.




