March 22, 2026

ಮಂಗಳೂರು: ಜುಗಾರಿ ಆಟ ಆಡುತ್ತಿದ್ದಾಗ ಪೊಲೀಸ್ ದಾಳಿ: ಮೂವರ ಬಂಧನ, 75 ಸಾವಿರ ಮೌಲ್ಯದ ಸ್ವತ್ತು ವಶ

0
IMG-20230315-WA0015.jpg

ಮಂಗಳೂರು: ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

ಬಂಧಿತರನ್ನು ಪ್ರವೀಣ್‌ (33), ಮನೋಜ್‌ (43), ರಾಕೇಶ್‌ (47) ಎಂದು ಗುರುತಿಸಲಾಗಿದೆ.

ಇನ್ನು ನಗರದ ಜ್ಯೋತಿ ಜಂಕ್ಷನ್‌ ಬಳಿ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

ಈ ವೇಳೆ 3000 ನಗದು, ಎರಡು ಮೊಬೈಲ್‌, ಎರಡು ಕಂಪ್ಯೂಟರ್‌ ಸೇರಿದಂತೆ 75 ಸಾವಿರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!