February 4, 2026

ರಕ್ತವಾಂತಿ ಮಾಡುತ್ತಿದ್ದ ಯುವಕನ ಹೊಟ್ಟೆಯಲ್ಲಿ ಪತ್ತೆಯಾಯ್ತು 56 ಶೇವಿಂಗ್ ಬ್ಲೇಡ್‌ಗಳು!

0
DB-08032023-blade.jpg

ಜೋಧಪುರ: ರಕ್ತವಾಂತಿ ಮಾಡುತ್ತಿದ್ದ ಯುವಕನೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿ ಶಸ್ತ್ರಚಿಕಿತ್ಸೆ ನಡೆಸಿದ ವೇಳೆ ಆತನ ಹೊಟ್ಟೆಯೊಳಗೆ 56 ಶೇವಿಂಗ್ ಬ್ಲೇಡ್ ತುಂಡುಗಳು ಪತ್ತೆಯಾದ ಘಟನೆ ರಾಜಸ್ಥಾನದ ಜಲೋರ್ನ ಸಂಚೋರ್ ಪ್ರದೇಶದಲ್ಲಿ ನಡೆದಿದೆ.

ಯುವಕ ಯಶ್ಪಾಲ್ ವಿಪರೀತ ರಕ್ತವಾಂತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಈ ವೇಳೆ ಡಾ. ನರಸಿ ರಾಮ್ ದೇವಸಿ ಅವರು ಯುವಕನಿಗೆ ಎಕ್ಸ್‌ರೇ ಬಳಿಕ ಸೋನೋಗ್ರಫಿ ನಡೆಸಿದರು. ಈ ವೇಳೆ ಆತನ ಹೊಟ್ಟೆಯಲ್ಲಿ ಶೇವಿಂಗ್ ಬ್ಲೇಡ್ ತುಂಡುಗಳಿರುವುದು ಪತ್ತೆಯಾಗಿದೆ. ಬಳಿಕ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ 56 ಶೇವಿಂಗ್ ಬ್ಲೇಡ್ ತುಂಡುಗಳನ್ನು ಹೊರ ತೆಗೆದಿದ್ದಾರೆ.

ಯುವಕನ ಹೊಟ್ಟೆಯೊಳಗೆ ಈ ಬ್ಲೇಡ್ ತುಂಡುಗಳು ಹೇಗೆ ಸೇರಿಕೊಂಡಿದೆ ಎಂಬ ಬಗ್ಗೆ ತಿಳಿದು ಬಂದಿಲ್ಲ. ಸದ್ಯ ಯಶ್ಪಾಲ್‌ನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!