March 22, 2026

ಶೌಚಾಗಾರ ಹಾಗೂ ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯ ದೇಹದ ಕೊಳೆತ ಭಾಗಗಳು ಪತ್ತೆ: 22 ವರ್ಷದ ಪುತ್ರಿಯ ಬಂಧನ

0
DB-21032023-arest.jpg

ಮುಂಬೈ: ಶೌಚಾಗಾರ ಹಾಗೂ ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯೊಬ್ಬರ ದೇಹದ ಕೊಳೆತ ಭಾಗಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪುತ್ರಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ವೀಣಾ ಪ್ರಕಾಶ್ ಜೈನ್ (53) ಮೃತ ಮಹಿಳೆಯಾಗಿದ್ದು, ಆಕೆಯ ಪುತ್ರಿ, ಶಂಕಿತ ಆರೋಪಿ 22 ವರ್ಷದ ಯುವತಿಯನ್ನು ಕಾಲಾಚೌಕಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಇನ್ನು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಆಕೆ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಮಹಿಳೆಯ ಕೈ ಮತ್ತು ಕಾಲುಗಳನ್ನು ಹರಿತವಾದ ಆಯುಧದಿಂದ ಕತ್ತರಿಸಲಾಗಿದ್ದು, ಆಕೆಯ ಮೃತದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಮನೆಯ ಕಪಾಟಿನೊಳಗೆ ಇಡಲಾಗಿತ್ತು. ಅಲ್ಲದೆ, ಶೌಚಾಗಾರ ಹಾಗೂ ನೀರಿನ ಟ್ಯಾಂಕ್‌ನಲ್ಲಿ ದೇಹದ ಕೊಳೆತ ಭಾಗಗಳು ಪತ್ತೆಯಾಗಿದ್ದವು. ಮೃತದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!