ಮಾಣಿ: ನೀರಿನಲ್ಲಿ ಮುಳುಗಿ 10ನೇ ತರಗತಿ ವಿದ್ಯಾರ್ಥಿ ಮೃತ್ಯು
ಮಾಣಿ: ಉಪ್ಪಿನಂಗಡಿ ಸಮೀಪದ ನೇತ್ರಾವತಿ ನದಿಯಲ್ಲಿ ಮುಳುಗಿ 10ನೇ ತರಗತಿ ಮೃತಪಟ್ಟ ಘಟನೆ ನಡೆದಿದೆ.
ಮಾಣಿ ನಿವಾಸಿ ತ್ವಾಹಿರ್ ರವರ ಪುತ್ರ ಮೃತಪಟ್ಟ ವಿದ್ಯಾರ್ಥಿ. ಈತ ಉಪ್ಪಿನಂಗಡಿ ಸಮೀಪದ ಪೆರ್ನೆ ನೇತ್ರಾವತಿ ನದಿ ಬಳಿ ತೆರಳಿದ್ದು, ಮುಳುಗಿ ಮೃತಪಟ್ಟಿದ್ದಾರೆ. ಮಾಣಿ ಬಾಲವಿಕಾಸ ಶಾಲೆಯ ವಿದ್ಯಾರ್ಥಿಯಾಗಿದ್ದು, ಮಾಣಿಯಿಂದ ಪೆರ್ನೆಯ ಸಂಬಂಧಿಕರ ಮನೆಗೆ ಬಂದಾಗ ಈ ಘಟನೆ ಸಂಭವಿಸಿದೆ.




