February 3, 2026

ಉಡುಪಿ: ಮಕ್ಕಾ- ಮದೀನಾಕ್ಕೆ ಉಮ್ರಾ ನೆರವೇರಿಸಲು ಹೋಗಿದ್ದ ಜಿಲ್ಲೆಯ ಇಬ್ಬರು ಮಹಿಳೆಯರು ಅನಾರೋಗ್ಯದಿಂದ ಮೃತ್ಯು

0
IMG-20230312-WA0009.jpg

ಉಡುಪಿ: ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾ- ಮದೀನಾಕ್ಕೆ ಉಮ್ರಾ ನೆರವೇರಿಸಲು ಹೋಗಿದ್ದ ರಾಜ್ಯದ ಉಡುಪಿ ಜಿಲ್ಲೆಯ ಇಬ್ಬರು ಮಹಿಳೆಯರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಮಾ. 9 ಹಾಗೂ 11 ರಂದು ಸೌದಿಅರೇಬಿಯಾದ ಮಕ್ಕಾದಲ್ಲಿ ನಡೆದಿದೆ.

ಮಂಗಳೂರಿನ ಟ್ರಾವೆಲ್ ಏಜೆನ್ಸಿ ವತಿಯಿಂದ 23 ಮಹಿಳೆಯರು ಹಾಗೂ 11 ಪುರುಷರು ಒಟ್ಟು 34 ಮಂದಿಯ ತಂಡವು ಮಾರ್ಚ್ 1ರಂದು ಮಂಗಳೂರಿನಿಂದ ಉಮ್ರಾ ನೆರವೇರಿಸಲು ಮಕ್ಕಾ ಕ್ಕೆ ಹೊರಟಿತ್ತು.

ಇವರು ಉಮ್ರಾ ಕಾರ್ಯ ಮುಗಿಸಿಕೊಂಡು ಮದೀನಾಕ್ಕೆ ಹೋಗುವ ತಯಾರಿಯಲ್ಲಿ ಇದ್ದಿದ್ದು. ಈ ಸಂದರ್ಭ ಬ್ರಹ್ಮಾವರ ತಾಲೂಕಿನ ಮಧುವನ ಅಚ್ಲಾಡಿಯ ಮರಿಯಮ್ಮ (66) ಮಾ. 9 ರಂದು ಗುರುವಾರ ಭಾರತೀಯ ಕಾಲಮಾನ ಬೆಳಿಗ್ಗೆ 5 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟರೆ,

2 ದಿನದ ನಂತರ ಜೊತೆಗೆ ಇದ್ದ ಮಹಿಳೆ ಮಧುವನ ಅಚ್ಲಾಡಿಯ ಖತಿಜಮ್ಮ (68) ಮಾರ್ಚ್ 11 ರಂದು ಶನಿವಾರ ಭಾರತದ ಕಾಲಮಾನ ಸಂಜೆ 3 ಗಂಟೆಗೆ ಅನಾರೋಗ್ಯದಿಂದ ಮೃತಪಟ್ಟರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!