May 14, 2026

ಕಂಠಪೂರ್ತಿ ಕುಡಿದು ಹಸೆಮಣೆಯಲ್ಲಿಯೇ ನಿದ್ರೆಗೆ ಜಾರಿದ ವರ: ಮದುವೆ ರದ್ದು

0
image_editor_output_image333350380-1678517649974.jpg

ಅಸ್ಸಾಂ: ಮದುವೆ ಎನ್ನುವುದು ಜೀವನದದ ಅದ್ಭುತ ಕ್ಷಣ. ಸುಂದರ ಕ್ಷಣದಲ್ಲಿ ಸಂತಸ, ಸಂಭ್ರಮವಿರುತ್ತದೆ. ಆದರೆ ಇಲ್ಲೊಂದು ಮದುವೆ ಸಮಾರಂಭ ಮದ್ಯದ ಕಾರಣದಿಂದ ರದ್ದಾಗಿದೆ. ಇದರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಸ್ಸಾಂಮಿನ ನಲ್ಬರಿ ಎಂಬಲ್ಲಿ ಇತ್ತೀಚೆಗೆ ಮದುವೆ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. ಹೆಣ್ಣಿನ ಕುಟುಂಬ ಮಂಟಪಕ್ಕೆ ಬಂದು ಕೂತಿದೆ. ಹಸೆಮಣೆಯಲ್ಲಿ ಕೂತ ವರನಿಗೆ ಆರ್ಚಕರು ಆಚರಣೆಯನ್ನು ಹೇಗೆ ಅನುಸರಿಸಬೇಕೆಂದು ಹೇಳಿಕೊಡುತ್ತಿದ್ದಾರೆ.

ಆದರೆ ವರ ಮಾತ್ರ ಅದನ್ನು ಕೇಳಿಸಿಕೊಳ್ಳಲು ಆಗುತ್ತಲೇ ಇಲ್ಲ. ಅದಕ್ಕೆ ಕಾರಣ ತನ್ನದೇ ಮದುವೆಯಲ್ಲಿ ವರ ಕಂಠಪೂರ್ತಿ ಕುಡಿದು ಹಸೆಮಣೆಯಲ್ಲಿ ಕೂತಿದ್ದಾನೆ.

ಮಂತ್ರ, ಆಚರಣೆ, ಸಂಪ್ರದಾಯವನ್ನು ಆರ್ಚಕರು ಹೇಳಿಕೊಡುತ್ತಿದ್ದಾರೆ ಆದರೆ ವರ ಮದ್ಯವನ್ನು ಸೇವಿಸಿದ ಪರಿಣಾಮ ಆತ ಸರಿಯಾಗಿ ಕೂರಲು ಸಮೇತ ಆಗುತ್ತಿಲ್ಲ. ಆತ ಕುಡಿದು ಟೈಟಾಗಿ ಮಂತ್ರವನ್ನು ಅರೆಬರೆಯಾಗಿ ಹೇಳುತ್ತಲೇ ಕುಡಿದು ಹಸೆಮಣೆಯಲ್ಲೇ ಬಿದ್ದಿದ್ದಾನೆ.

Leave a Reply

Your email address will not be published. Required fields are marked *

error: Content is protected !!