March 21, 2026

ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ನಟಿ ನಗ್ಮಾ

0
image_editor_output_image1407384659-1678366821115.jpg

ಬೆಂಗಳೂರು: ನಟಿ ನಗ್ಮಾ ಸೈಬರ್ ವಂಚಕರು ಬೀಸಿದ್ದ ಬಲೆಗೆ ಬಿದ್ದಿದ್ದಾರೆ. ಕೇವಲ ಐದೇ ನಿಮಿಷದಲ್ಲಿ ಸಾಕಷ್ಟು ಹಣವನ್ನೂ ಅವರು ಕಳೆದುಕೊಂಡಿದ್ದಾರೆ.

ಬ್ಯಾಂಕ್ ಹೆಸರಿನಲ್ಲಿ ನಗ್ಮಾಗೆ ಕರೆ ಮಾಡಿದ್ದ ವಂಚಕರು, ಕ್ಷಣಾರ್ಧದಲ್ಲೇ ಅವರ ಖಾತೆಯನ್ನು ಹಣವನ್ನು ದೋಚಿಸಿದ್ದಾರೆ.

ಫೆಬ್ರವರಿ 28 ರಂದು ನಗ್ಮಾ ಅವರ ಮೊಬೈಲ್ ಸಂಖ್ಯೆಗೆ ಮಸೇಜ್ ಬಂದಿದೆ. ಬ್ಯಾಂಕ್ ಖಾತೆಗಾಗಿ ಕೆವೈಸಿ ಭರ್ತಿ ಮಾಡಿ ಎಂದು ಮಸೇಜ್ ನಲ್ಲಿ ಉಲ್ಲೇಖಿಸಲಾಗಿದೆ.

ಮಸೇಜ್ ಬಂದ ಹಿಂದೆಯೇ ಖದೀಮರು ಕಾಲ್ ಕೂಡ ಮಾಡಿದ್ದಾರೆ. ಮಸೇಜ್ ಹೇಳಿದಂತೆ ಭರ್ತಿ ಮಾಡಲು ತಿಳಿಸಿದ್ದಾರೆ. ಅದು ಬ್ಯಾಂಕ್ ನಿಂದ ಬಂದಿರುವ ಕರೆ ಎಂದು ನಂಬಿರುವ ನಗ್ಮಾ ಕೆವೈಸಿ ಭರ್ತಿ ಮಾಡಿದ್ದಾರೆ.

ಕ್ಷಣಾರ್ಧಲ್ಲೆ ಅವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂಪಾಯಿ ಡ್ರಾ ಆಗಿದೆ.

Leave a Reply

Your email address will not be published. Required fields are marked *

error: Content is protected !!