February 3, 2026

ಪತ್ನಿಯೊಂದಿಗೆ ವಿಶ್ವ ಪರ್ಯಟನೆ ಮಾಡಿದ ಕೇರಳದ ಟೀ ಮಾರಾಟಗಾರ ಹೃದಯಾಘಾತದಿಂದ ನಿಧನ

0
Screenshot_20211119-181521_Chrome.jpg

ಕೊಚ್ಚಿ: ವರ್ಷವಿಡಿ ಟೀ ಮಾರಾಟ ಮಾಡುತ್ತಾ ಬಂದ ಹಣದಿಂದ ಪತ್ನಿಯೊಂದಿಗೆ ವಿಶ್ವ ಪರ್ಯಾಟನೆ ಮಾಡುತ್ತಾ ಖ್ಯಾತಿ ಪಡೆದಿದ್ದ ಕೇರಳದ ಕೆ.ಆರ್ ವಿಜಯನ್ ಕೊನೆಯುಸಿರೆಳೆದಿದ್ದಾರೆ.

71 ವರ್ಷದ ವಿಜಯನ್ ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ವಿಜಯ್ ಹಾಗೂ ಅವರ ಪತ್ನಿ ಮೋಹನಾ ಕೊಚ್ಚಿಯ ಗಾಂಧಿ ನಗರದಲ್ಲಿ ಶ್ರೀ ಬಾಲಾಜಿ ಕಾಫಿ ಹೌಸ್ ಎಂಬ ಟೀ ಶಾಪ್ಅನ್ನು ನಡೆಸುತ್ತಿದ್ದರು. ಇಲ್ಲಿ ವರ್ಷವಿಡಿ ಕುಡಿಟ್ಟಿದ್ದ ಹಣದಿಂದ ದೇಶ-ವಿದೇಶಗಳಿಗೆ ದಂಪತಿ ಭೇಟಿ ಪ್ರಯಾಣಿಸುತ್ತಿದ್ದರು. ಇತ್ತೀಚೆಗಷ್ಟೇ ಈ ದಂಪತಿ ರಷ್ಯಾಗೂ ಭೇಟಿ ನೀಡಿದ್ದರು. ರಷ್ಯಾದಿಂದ ವಾಪಸ್ ಆದ ಕೆಲ ದಿನಗಳ ಸಮಯದಲ್ಲೇ ವಿಜಯನ್ ಮೃತಪಟ್ಟಿದ್ದಾರೆ.

ಪ್ರತಿದಿನ 300 ರೂಪಾಯಿ ಆದಾಯ ಗಳಿಸುತ್ತಿದ್ದ ದಂಪತಿ ಕಳೆದ 16 ವರ್ಷಗಳ ಅವಧಿಯಲ್ಲಿ 26 ದೇಶಗಳಿಗೆ ಭೇಟಿ ನೀಡಿದ್ದಾರೆ. ವಿಜಯನ್ ಅವರು ಬಾಲಕರಾಗಿದ್ದ ಸಂದರ್ಭದಲ್ಲಿ ತಮ್ಮ ತಂದೆಯೊಂದಿಗೆ ಒಂದೆರಡು ದಿನ ಪ್ರವಾಸವನ್ನು ಕೈಗೊಳ್ಳುತ್ತಿದ್ದರು. ಮೊದಲು ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದ ಅವರು ಆ ಬಳಿಕ ವಿದೇಶಗಳಿಗೂ ತೆರಳುತ್ತಿದ್ದರು. ಮದುವೆಯಾದ ಬಳಿಕ 2007ರಲ್ಲಿ ಮೊದಲ ಬಾರಿಗೆ ವಿಜಯನ್ ಪತ್ನಿಯೊಂದಿಗೆ ಇಸ್ರೇಲ್ ಗೆ ಭೇಟಿ ನೀಡಿದ್ದರು.

ಇಬ್ಬರು ದಂಪತಿಗಳ ವಿದೇಶ ಪ್ರಯಾಣ ಮಾಧ್ಯಮಗಳಲ್ಲಿ ವರದಿಯಾದ ಬಳಿಕ, ಹಲವರು ಇವರ ಪ್ರವಾಸಗಳಿಗೆ ಹಣವನ್ನು ನೀಡುತ್ತಿದ್ದರು. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಗೆ ದಂಪತಿ ಇದೇ ರೀತಿ ಪ್ರಯಾಣ ಮಾಡಿದ್ದರು. ವಿಜಯನ್ ಅಂತಿಮವಾಗಿ ರಷ್ಯಾಗೆ ಪ್ರಯಾಣಿಸಿದ್ದು ಕೂಡ ಪ್ರಯೋಜಿತವಾಗಿತ್ತು. ಆದರೆ ಈ ಪ್ರವಾಸದಲ್ಲಿ ಅವರ ಇಬ್ಬರು ಪುತ್ರಿಯರು ಹಾಗೂ ಕುಟುಂಬ ಸದಸ್ಯರು ತಮ್ಮದೇ ವೆಚ್ಚದಲ್ಲಿ ಭಾಗಿಯಾಗಿದ್ದರು.

ವಿಜಯನ್ ತಮ್ಮ ಮುಂದಿನ ಪ್ರವಾಸದಲ್ಲಿ ಜಪಾನ್‌ಗೆ ಭೇಟಿ ನೀಡಲು ಸಿದ್ಧತೆ ನಡೆಸಿದ್ದರು. ತಮ್ಮ ಜೀವನದ ನೆನಪುಗಳನ್ನು ದಂಪತಿ ಪುಸ್ತಕದ ರೂಪದಲ್ಲಿ ಹೊರತಂದಿದ್ದರು. ಈ ಪುಸ್ತಕವನ್ನು ವಿವಿಧ ಭಾಷೆಗಳಿಗೂ ಭಾಷಾಂತರಿಸಲಾಗಿತ್ತು. ಹಲವರಿಗೆ ಪ್ರವಾಸ ಕೈಗೊಳ್ಳಲು ಈ ಪುಸ್ತಕ ಸ್ಫೂರ್ತಿಯಾಗಿತ್ತು.

Leave a Reply

Your email address will not be published. Required fields are marked *

error: Content is protected !!