February 3, 2026

ಸಮಾಜದಲ್ಲಿ ಮಹಿಳೆಯ ಶೋಷಣೆ ಮತ್ತು ರಕ್ಷಣೆ

0
IMG-20230308-WA0007.jpg

ಲೇಖನ: ರಹಿಮಾನ್ ಬೋಳಿಯಾರ್🖋
ವಿಶ್ವ ಮಹಿಳಾ ದಿನಾಚರಣೆಯ ಸುಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.
ಈ ಸಂದರ್ಭದಲ್ಲಿ ಒಂದೆರಡು ಅನಿಸಿಕೆಗಳನ್ನು ಬರಹದ ಮೂಲಕ ವ್ಯಕ್ತಪಡಿಸಲು ಇಷ್ಟಪಡುತ್ತಿದ್ದೇನೆ.

ಹೌದು ಖಂಡಿತವಾಗಿಯೂ ಪ್ರತಿವರ್ಷವೂ ಕೇವಲ ಮಹಿಳಾ ದಿನಾಚರಣೆಗಳು ಮಾತ್ರ ನಡೆಯುತ್ತಿದೆ ಹೊರತು ಮಹಿಳೆಯ ಸುರಕ್ಷಿತೆಗಾಗಿ ಮತ್ತು ಮಹಿಳೆಯು ಭಯಮುಕ್ತಳಾಗಿರಲು ಯಾವುದೇ ರೀತಿಯ ವ್ಯವಸ್ಥೆಗಳು, ಬಲವಾದ ಕಾನೂನುಗಳು ಜಾರಿಗೊಳ್ಳುವುದು ಕಂಡುಬರುವುದಿಲ್ಲ.

ಹೆಣ್ಣು ಶತಮಾನಗಳಿಂದಲೂ ಒಂದಲ್ಲಾ ಒಂದು ರೀತಿಯ ದೌರ್ಜನ್ಯಕ್ಕೊಳಗಾಗುತ್ತ ಬಂದಿರುವಳು. ಮಾನಸಿಕವಾಗಿ ದೈಹಿಕವಾಗಿ, ಲೈಂಗಿಕವಾಗಿ ಈಗೆ ಹಲವಾರು ನೋವುಗಳಿಗೆ, ಚಿತ್ರಹಿಂಸೆಗಳಿಗೆ ಒಳಗಾಗುವ ಅವಳ ಬದುಕು ನಿತ್ಯ ಕಣ್ಣೀರಿನೊಂದಿಗೆನೇ ದಿನ ಕಳೆಯುತ್ತಿರುತ್ತದೆ.
ಇದು ಕಡುಬಡವರಿಂದ ಹಿಡಿದು ಶ್ರೀಮಂತ ಕುಟುಂಬದ ಮಹಿಳೆಯ ತನಕ ವ್ಯತ್ಯಾಸ ಇಲ್ಲದೆ ಇಂತಹ ಶೋಷಣೆಗೆ ಒಳಗಾಗುತ್ತಾರೆ.

ಭಾರತದಲ್ಲಿ ಹೆಣ್ಣಿನ ದೌರ್ಜನ್ಯತೆಯ ತೀರ್ವತೆಯ ಅಂಕಿಅಂಶದ ಪ್ರಕಾರ ಪ್ರತಿ 7 ನಿಮಿಷಕ್ಕೆ ಒಬ್ಬ ಮಹಿಳೆಯ ಅತ್ಯಾಚಾರ ನಡೆಯುತ್ತಿದೆ. ಇದರ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಕಮ್ಮಿ ಆಗುವುದು ಕಂಡುಬರುತ್ತಿಲ್ಲ. ಗ್ರಹ ಖಾತೆ ಪೋಲೀಸ್ ರಿಸರ್ಚ್ ಆಫ್ ಸೋಶಿಯಲ್ ಡಿಫೆನ್ಸ್ ಆಧರಿಸಿದ ಮಾಹಿತಿ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ಸರಾಸರಿ ಹದಿನೈದು ಸಾವಿರ ರೇಪ್ ಗಳು, ನಲ್ವತ್ತು ಸಾವಿರ ಮಹಿಳಾ ಪೀಡನೆ ಪ್ರಕರಣಗಳು ಸಾವಿರಕ್ಕಿಂತಲೂ ಅಧಿಕ ಅಪಹರಣಗಳು, ಚಿತ್ರಹಿಂಸೆಗಳು, ಕೀಟಲೆ ಪ್ರಕರಣಗಳು, ಅದೇ ರೀತಿ ವರದಕ್ಷಿಣೆಯ ಕಿರುಕುಳದಿಂದ ನಡೆಯುವ ಸಾವುಗಳು ಹೆಣ್ಣಿನ ಬದುಕನ್ನೇ ಭಯಭೀತಗೊಳಿಸುತ್ತಿದೆ.
ಅದರಲ್ಲಿಯೂ ವಿಶೇಷವಾಗಿ ಬಿಜೆಪಿಯ ಯೋಗಿ ಆದಿತ್ಯನ ಆಡಳಿತದ ಉತ್ತರ ಪ್ರದೇಶವು ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವ ಒಂದು ಕಾರ್ಖಾನೆಯಾಗಿ ಬದಲಾಗುತ್ತಿರುವುದು ಈ ದೇಶದ ಅತೀ ದೊಡ್ಡ ದುರಂತ.

ಆದುದರಿಂದ ನಮ್ಮ ದೇಶದ ಮಹಿಳೆಯರು ಎಲ್ಲಾ ರೀತಿಯ ಶೋಷನೆಗಳಿಂದ ಮತ್ತು ಭಯಮುಕ್ತದಿಂದ ಜೀವನ ಸಾಗಿಸಬೇಕಾದರೆ ಒಂದು ಮಹಿಳೆಯು ಮದ್ಯರಾತ್ರಿಯಲ್ಲಿ ಯಾವುದೇ ರೀತಿಯ ಭಯವಿಲ್ಲದೆ ತನ್ನ ಮನೆ ತಲುಪುವ ಕಾಲ ಆದಷ್ಟು ಬೇಗ ಕೂಡಿ ಬರಬೇಕಾಗಿದೆ. ಈ ಕಾಲ ಕೂಡಿ ಬಂದರೆ ಖಂಡಿತವಾಗಿಯೂ ನಾವು ಆಚರಿಸುವ ಮಹಿಳಾ ದಿನಾಚರಣೆಗೆ ಒಂದು ಅರ್ಥವಿರುತ್ತದೆ.

Leave a Reply

Your email address will not be published. Required fields are marked *

error: Content is protected !!