ಬೀದಿ ಬದಿಯಲ್ಲಿ ಹೊಡೆದಾಡಿಕೊಂಡ ಯುವತಿಯರು: ವೀಡಿಯೊ ವೈರಲ್
ಧಾರವಾಡ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಯುವತಿಯರು ಬೀದಿ ಬದಿಯಲ್ಲಿ ಹೊಡೆದಾಡಿಕೊಂಡ ಪ್ರಸಂಗವೊಂದು ನಡೆದಿದೆ.
ಧಾರವಾಡ ದ ಓಲ್ಡ್ ಡಿಎಸ್ಪಿ ಸರ್ಕಲ್ ಬಳಿ ಘಟನೆ ನಡೆದಿದೆ. ಕಾರಿನಲ್ಲಿ ಜೊತೆಯಾಗಿ ಬಂದಿದ್ದ ಯುವತಿಯರು, ಆರಂಭದಲ್ಲಿ ಕಾರಿನೊಳಗೆ ಕಾದಾಟ ನಡೆಸಿದ್ದಾರೆ. ಬಳಿಕ ಕಾರಿನಿಂದ ಇಳಿದು ಹೊಡೆದಾಡಿಕೊಂಡಿದ್ದಾರೆ.
ಯುವತಿಯರು ಜುಟ್ಟು ಜುಟ್ಟು ಹಿಡಿದು ಹೊಡೆದಾಡಿಕೊಂಡ ವೀಡಿಯೋವನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.




