June 25, 2026

ಕಾಸರಗೋಡು: ಕಿಡ್ನಾಪ್‌ ಮಾಡಿ ಕೊಲೆಗೈದ ಪ್ರಕರಣ: ವಿದೇಶದಿಂದ ಮರಳುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಆರೋಪಿಯ ಬಂಧನ

0
IMG-20230305-WA0021.jpg

ಕಾಸರಗೋಡು: ಗಲ್ಫ್ ಉದ್ಯೋಗಿ, ಅಬೂಬಕ್ಕರ್ ಸಿದ್ದೀಕ್ ಎಂಬಾತನನ್ನು ಅಪಹರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಕೇರಳ ತನಿಖಾ ತಂಡ ಬಂಧಿಸಿದೆ

ಪೈವಳಿಕೆ ಪಳ್ಳಿಕೂಡಲ್ ನ ಅಬ್ದುಲ್ ಜಲೀಲ್ (29) ಬಂಧಿತ ಆರೋಪಿ.

ಕೃತ್ಯದ ಬಳಿಕ ಈತ ವಿದೇಶಕ್ಕೆ ಪರಾರಿಯಾಗಿದ್ದನು. ಈತ ಊರಿಗೆ ಮರಳುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಣ್ಣೂರು ವಿಮಾನ ನಿಲ್ದಾಣದಿಂದ ಈತನನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ಎಂಟಕ್ಕೇರಿದೆ.

ಇನ್ನು ಕೃತ್ಯದಲ್ಲಿ ನೇರವಾಗಿ ಶಾಮೀಲಾದ ಹಾಗೂ ಸಂಚು ರೂಪಿಸಿದವರು ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!