February 3, 2026

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಮೀಡಿಯಾ ವಾರ್ ರೂಮ್ ಉದ್ಘಾಟನೆ ಕಾರ್ಯಕ್ರಮ

0
IMG-20230304-WA0001.jpg

ಬೆಳ್ತಂಗಡಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023 ಪ್ರಯುಕ್ತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಮೀಡಿಯಾ ವಾರ್ ರೂಮ್ ಉದ್ಘಾಟನೆ ಕಾರ್ಯಕ್ರಮ ಕ್ಷೇತ್ರಾಧ್ಯಕ್ಷ ನವಾಝ್ ಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಅವರು ನೂತನ ಮೀಡಿಯಾ ವಾರ್ ರೂಮ್ ಉದ್ಘಾಟನೆ ಮಾಡಿದರು. ಎಸ್‌ಡಿಪಿಐ ಎಂಬುದು ನೈಜ ಜಾತ್ಯತೀತ ಪಕ್ಷವಾಗಿದ್ದು, ಎಲ್ಲರನ್ನೂ ಸಮಾನವಾಗಿ ಕಾಣುವ ಮತ್ತು ಸಮ ಸಮಾಜದ ನಿರ್ಮಾಣಕ್ಕೆ ಕಟಿಬದ್ಧವಾದ ಪಕ್ಷವಾಗಿದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿಯವರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮ ವಹಿಸಬೇಕೆಂದು ಕರೆ ನೀಡಿದರು.

ಬೆಳ್ತಂಗಡಿ ಕ್ಷೇತ್ರ ಸಮಿತಿಯ ಮೀಡಿಯಾ ವಾರ್ ರೂಮ್ ದೂರವಾಣಿ ಸಂಖ್ಯೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ, ಕ್ಷೇತ್ರ ಸಮಿತಿ ಪಕ್ಷ ಸಂಘಟನಾ ಕಾರ್ಯದರ್ಶಿ ನಿಸಾರ್ ಕುದ್ರಡ್ಕ, ಮಾಧ್ಯಮ ಉಸ್ತುವಾರಿ ಜುನೈದ್ ಪಡಂದಡ್ಕ, ಮಹಮ್ಮದ್ ಆಲಿ ಉಜಿರೆ, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!