ಕಡಬ: ಮನೆಕೆಲಸಕ್ಕೆಂದು ಬಂದಿದ್ದ ಇಬ್ಬರಿಂದ ದಂಪತಿಯ ಮೇಲೆ ಹಲ್ಲೆ
ಕಡಬ: ಮನೆಕೆಲಸಕ್ಕೆಂದು ಬಂದಿದ್ದ ಇಬ್ಬರು ಮನೆಯಲ್ಲಿದ್ದ ದಂಪತಿಯ ಮೇಲೆ ಹಲ್ಲೆ ಮಾಡಿದ ಘಟನೆ ಕಡಬ ತಾಲೂಕಿನ ಪಂಜ ಗ್ರಾಮದಲ್ಲಿ ನಡೆದಿದೆ.
ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ವಿಶ್ವನಾಥ್ ಮತ್ತು ಗಾಯತ್ರಿ ದಂಪತಿ ಹಲ್ಲೆಗೊಳಗಾದವರು.
ದಂಪತಿ ಬೊಬ್ಬೆ ಹೊಡೆದಿದ್ದನ್ನು ಕೇಳಿಸಿಕೊಂಡು ಅಕ್ಕಪಕ್ಕದವರು ಓಡಿ ಬಂದಿದ್ದರಿಂದ ಪ್ರಾಣಹಾನಿ ತಪ್ಪಿದೆ ಎಂದು ಹೇಳಲಾಗಿದೆ. ಘಟನೆ ಸಂಬಂಧಿಸಿದಂತೆ ಆರೋಪಿಗಳಾದ ವರದರಾಜ್, ಸೈಫನ್ ಎಂಬ ಇಬ್ಬರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.




