ಅರ್ಜೆಂಟೀನಾ ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಹಾಯಕ ಸಿಬ್ಬಂದಿಗೆ ಚಿನ್ನದ ಐಫೋನ್‌ಗಳನ್ನು ನೀಡಲು ಮುಂದಾದ ಮೆಸ್ಸಿ
ಅರ್ಜೆಂಟೀನಾ: ಫಿಫಾ ವಿಶ್ವಕಪ್ ವಿಜೇತ ತಾರೆ ಲಿಯೋನೆಲ್ ಮೆಸ್ಸಿ ಅವರು 2022 ರ ಕತಾರ್‌ನಲ್ಲಿ ನಡೆದ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಐತಿಹಾಸಿಕ ಗೆಲುವಿನ ಭಾಗವಾಗಿದ್ದ ತಮ್ಮ ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಹಾಯಕ ಸಿಬ್ಬಂದಿಗೆ ಚಿನ್ನದ ಐಫೋನ್‌ಗಳನ್ನು ನೀಡಲು ನಿರ್ದರಿಸಿದ್ದಾರೆ.
ದ ಸನ್ ವರದಿಯ ಪ್ರಕಾರ, £175,000 (ಅಂದಾಜು ರೂ. 1.73 ಕೋಟಿ) ಮೌಲ್ಯದ 24ಕ್ಯಾರೆಟ್ ನ ಮೊಬೈಲ್ ನಲ್ಲಿ ಆಟಗಾರನ ಹೆಸರು, ಜೆರ್ಸಿ ಸಂಖ್ಯೆ ಮತ್ತು ಅರ್ಜೆಂಟೀನಾದ ಲೋಗೋವನ್ನು ಕೆತ್ತಲಾಗಿದೆ. ಮೆಸ್ಸಿ ಶನಿವಾರದಂದು ತನ್ನ ಪ್ಯಾರಿಸ್ ಅಪಾರ್ಟ್ಮೆಂಟ್ಗೆ ಎಲ್ಲಾ ಮೊಬೈಲ್ ಗಳನ್ನು ತಲುಪಿಸಿದ್ದರು.
35 ವರ್ಷದ ಮೆಸ್ಸಿ, 1986 ರಿಂದ ಅರ್ಜೆಂಟೀನಾವನ್ನು ವಿಶ್ವ ವೇದಿಕೆಯಲ್ಲಿ ಮೊದಲ ಪ್ರಶಸ್ತಿಗೆ ಮಾರ್ಗದರ್ಶನ ಮಾಡುವ ಮೂಲಕ ವಿಶ್ವಕಪ್ ಟ್ರೋಫಿಗಾಗಿ ತಮ್ಮ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದರು.
ಮೆಸ್ಸಿ ಗೆಲುವನ್ನು ಆಚರಿಸಲು ತನ್ನ ಎಲ್ಲ ಆಟಗಾರರು ಹಾಗೂ ಸಿಬ್ಬಂದಿಗೆ ವಾಚನ್ನು ಗಿಫ್ಟ್ ನೀಡುವ ಬದಲು ವಿಶೇಷ ಉಡುಗೊರೆ ನೀಡಲು ಬಯಸಿದ್ದರು. ಆಟಗಾರರ ಹೆಸರನ್ನು ಹೊಂದಿರುವ ಚಿನ್ನದ ಐಫೋನ್‌ಗಳನ್ನು ನೀಡುವಂತೆ ನಾನು ಸೂಚಿಸಿದೆ. ನನ್ನ ಐಡಿಯಾ ಅವರಿಗೆ ಇಷ್ಟವಾಯಿತು ಎಂದು ಐಡಿಸೈನ್ ಗೋಲ್ಡ್‌ನ ಸಿಇಒ ಬೆನ್ ಹೇಳಿದ್ದಾರೆಂದು ‘ದಿ ಸನ್’ ವರದಿ ಮಾಡಿದೆ.
ಅರ್ಜೆಂಟೀನಾ ತನ್ನ ಮೂರನೇ ವಿಶ್ವಕಪ್ ಪ್ರಶಸ್ತಿಯನ್ನು ಪೆನಾಲ್ಟಿಯಲ್ಲಿ ಫ್ರಾನ್ಸ್ 4-2 ರಿಂದ ಸೋಲಿಸಿ ನಾಯಕ ಲಿಯೋನೆಲ್ ಮೆಸ್ಸಿ ತನ್ನ ಮೊದಲ ವಿಶ್ವಕಪ್ ಟ್ರೋಫಿಯನ್ನು ಗೆದ್ದಿದ್ದಾರೆ.




