May 12, 2026

ಚಲಿಸುತ್ತಿರುವ ಕಾರಿನ ಮೇಲೆ ಯುವಕನ ಸ್ಟಂಟ್: ಡ್ರೈವಿಂಗ್ ಲೈಸೆನ್ಸ್ ಅಮಾನತು

0
image_editor_output_image924934343-1677762533320.jpg

ಉತ್ತರ ಪ್ರದೇಶ: ಚಲಿಸುತ್ತಿರುವ ಕಾರಿನ ಮೇಲೆ ಯುವಕನೊಬ್ಬ ಕುಳಿತು ಸ್ಟಂಟ್ ಮಾಡಲು ಹೋಗಿ ತನ್ನ ಡ್ರೈವಿಂಗ್ ಲೈಸೆನ್ಸ್ ಅನ್ನೇ ಕಳೆದುಕೊಂಡ ಘಟನೆ ನಡೆದಿದೆ.

ಗೌತಮ್ ಬುದ್ಧ ನಗರದಲ್ಲಿ ವ್ಯಕ್ತಿಯೊಬ್ಬ ರಸ್ತೆಯುದ್ದಕ್ಕೂ ಕಾರು ಚಾಲನೆ ಮಾಡಿದ್ದು ಅಲ್ಲದೆ ಈ ವೇಳೆ ಕಾರಿನ ಮೇಲೆ ಯುವಕನೊಬ್ಬ ಕುಳಿತು ಸ್ಟಂಟ್ ಮಾಡಿದ್ದಾನೆ, ಜೊತೆ ಗೆಳೆಯರು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ,

ವೀಡಿಯೊ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಗೌತಮ್ ಬುದ್ಧ ನಗರ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥ ಯುವಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಅಲ್ಲದೆ ಸ್ಟಂಟ್ ಮಾಡಿದ ಯುವಕರಿಗೆ 26,000 ರೂ. ದಂಡ ವಿಧಿಸಲಾಗಿದೆ ಜೊತೆಗೆ ವಾಹನದ ಆರ್ ಸಿ ಮತ್ತು ಯುವಕನ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!