March 11, 2026

ಮಾಜಿ ವಿಶ್ವಸುಂದರಿ, ನಟಿ ಸುಶ್ಮಿತಾ ಸೇನ್ಗೆ ಹೃದಯಾಘಾತ: ಅಭಿಮಾನಿಗಳಿಗೆ ಹೆಚ್ಚಿದ ಆತಂಕ

0
IMG-20230302-WA0027.jpg

ಮುಂಬೈ: ಮಾಜಿ ವಿಶ್ವಸುಂದರಿ, ನಟಿ ಸುಶ್ಮಿತಾ ಸೇನ್‌ ಅವರಿಗೆ ಹೃದಯಾಘಾತವಾಗಿರುವ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನಗೆ ಎರಡು ದಿನಗಳ ಹಿಂದೆ ಹೃದಯಾಘಾತವಾಗಿದ್ದು, ಹೃದಯಾಘಾತ ಆದ ಕೂಡಲೇ ಅವರಿಗೆ ವೈದ್ಯಕೀಯ ನೆರವು ಸಿಕ್ಕಿತು. ವೈದ್ಯರ ಸಲಹೆ ಮೇರೆಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಮತ್ತು ಸ್ಟೆಂಟ್ಸ್​ ಅಳವಡಿಸಲಾಗಿದೆ. ಈಗ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.

ಇನ್ನು ನನ್ನ ಕಷ್ಟದ ಸಂದರ್ಭದಲ್ಲಿ ನನಗೆ ಹಲವರು ನೆರವಿಗೆ ಬಂದಿದ್ದು, ಅವರಿಗೆಲ್ಲ ಪ್ರತ್ಯೇಕ ಪೋಸ್ಟ್​ನಲ್ಲಿ ಧನ್ಯವಾದ ತಿಳಿಸುವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!