ರೈಲು, ಸರಕು ಸಾಗಾಣಿಕೆ ರೈಲಿನ ನಡುವೆ ಢಿಕ್ಕಿ: 26 ಪ್ರಯಾಣಿಕರು ಸಾವು
ಗ್ರೀಸ್: ಪ್ರಯಾಣಿಕರ ರೈಲು ಹಾಗೂ ಸರಕು ಸಾಗಾಣಿಕೆ ರೈಲಿನ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 26 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಗ್ರೀಸ್‌ನಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.
ಅಲ್ಲದೆ, ಘಟನೆಯಲ್ಲಿ 85 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಥೆನ್ಸ್‌ನ ಉತ್ತರ ಭಾಗದಲ್ಲಿ ಸುಮಾರು 380 ಕಿಲೋಮೀಟರ್ (235 ಮೈಲು ದೂರ) ದೂರದಲ್ಲಿರುವ ಟೆಂಪೆ ಬಳಿ ಅವಘಡ ಸಂಭವಿಸಿದೆ.
ಡಿಕ್ಕಿ ರಭಸಕ್ಕೆ ಕೆಲ ಬೋಗಿಗಳು ಹಳಿತಪ್ಪಿದ್ದಲ್ಲದೆ, ಮೂರು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿತ್ತು.
ಕನಿಷ್ಠ 25 ಜನರಿಗೆ ಗಂಭೀರ ಗಾಯಗಳಾಗಿದೆ ಎಂದು ಹತ್ತಿರದ ಲಾರಿಸ್ಸಾ ನಗರದ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.





