February 3, 2026

ಮಂಗಳೂರು: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಇನ್ಸ್‌ಪೆಕ್ಟರ್ ಪುತ್ರ ನಾಪತ್ತೆ

0
image_editor_output_image-434715722-1637298431170.jpg

ಮಂಗಳೂರು: ಪಚ್ಚನಾಡಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಇನ್ಸ್‌ಪೆಕ್ಟರ್ ಅಜಿತ್ ಎಸ್ ಅವರ ಪುತ್ರ ಆಕಾಶ್ (20) ನಾಪತ್ತೆಯಾಗಿದ್ದಾರೆ.

ಆಕಾಶ್‌ಗೆ ಬಾಲ್ಯದಿಂದಲೂ ಮಾತನಾಡುವಾಗ ಸ್ಪಲ್ಪ ಸಮಸ್ಯೆಯಾಗುತ್ತಿದ್ದು, ಕಳೆದ ಎರಡು ವರ್ಷಗಳಿಂದ ಮನೆಯಲ್ಲೇ ಇದ್ದ. ನವೆಂಬರ್ 17ರ ಬುಧವಾರದಂದು ಬೊಂದೇಲ್ ಜಂಕ್ಷನ್ ಬಳಿಯಿಂದ ಹಾಲು ತರಲು ಮನೆಯಿಂದ ಹೊರಟಿದ್ದು ಬಳಿಕ ನಾಪತ್ತೆಯಾಗಿದ್ದಾರೆ.

ಆಕಾಶ್ 165 ಸೆಂ.ಮೀ ಎತ್ತರ, ಅವನ ಮೈಬಣ್ಣ ಕಪ್ಪಾಗಿದ್ದು, ಯುವಕನ ಬಗ್ಗೆ ಮಾಹಿತಿ ಇದ್ದವರು ಕಂಕನಾಡಿ ಕಂಕನಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!