ಟ್ರಕ್, ಕಾರಿನ ನಡುವೆ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು
ಛತ್ತೀಸ್ ಗಢ: ಟ್ರಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ಬಲೋದ್ ನಲ್ಲಿ ನಡೆದಿದೆ.
ಸಿಮ್ರಾನ್, ರಾಜ್ ವೀರ್ ಸಲೂಜಾ ಸೇರಿ ನಾಲ್ವರು ಕೆಲಸದ ನಿಮಿತ್ತ ರಾಯ್ ಪುರಕ್ಕೆ ಹೋಗಿದ್ದರು. ಅಲ್ಲಿ ಸಿಮ್ರಾನ್ ಅವರ ಕಾರು ಕೆಟ್ಟು ನಿಂತ ಕಾರಣ, ಬಲೋದ್ ಗೆ ಮರಳಲು ಬಾಡಿಗೆ ಕಾರೊಂದನ್ನು ಮಾಡಿದ್ದರು.
ಈ ವೇಳೆ ವಾಪಾಸಾಗುವಾಗ ಜಿಲ್ಲೆಯ ಗುಂಡರ್ದೇಹಿ ಪೊಲೀಸ್ ಠಾಣೆ ವ್ಯಾಪ್ತಿಯ ಖಪಡವಾಡ ಕಬ್ಬಿಣ ತುಂಬಿದ್ದ ಟ್ರಕ್ ಗೆ ಕಾರು ಢಿಕ್ಕಿ ಹೊಡೆದಿದೆ.





