ಕೊಚ್ಚಿ: ಮಲಯಾಳಂ ಖ್ಯಾತ ನಟಿ ಸುಬಿ ಸುರೇಶ್(34) ನಿಧನರಾಗಿದ್ದಾರೆ.
ಅವರು ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದರು. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಆದರೆ ಚಿಕಿತ್ಸೆ ಫಲಿಸದೆ ಬುಧವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಹಾಸ್ಯಕ್ಕೆ ಹೆಸರುವಾಸಿಯಾದ ಸುಬಿ ಅವರು ವಿವಿಧ ಸ್ಟೇಜ್ ಶೋಗಳಲ್ಲಿ ಪ್ರದರ್ಶನ ನೀಡಿದ್ದಾರೆ.
