March 21, 2026

ಬಂಟ್ವಾಳ| ರೈಲ್ವೆ ಟ್ರಾಕ್ ನಲ್ಲಿ ಹೋಗುತ್ತಿದ್ದಾಗ ರೈಲು‌ ಢಿಕ್ಕಿ: ಬಿಜಾಪುರದ ವ್ಯಕ್ತಿ ಸಾವು

0
image_editor_output_image826379149-1676885343412.jpg

ಬಂಟ್ವಾಳ: ರೈಲ್ವೆ ಟ್ರಾಕ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನಿಗೆ ರೈಲು ಬಡಿದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅಮ್ಟೂರು ಎಂಬಲ್ಲಿ ಫೆ.20 ರಂದು ಸೋಮವಾರ ಮುಂಜಾನೆ ವೇಳೆ ನಡೆದಿದೆ.

ಬಿಜಾಪುರ ಮೂಲದ ಮಲ್ಲು ಆಧಿಮಣಿ (33) ಮೃತಪಟ್ಟ ಅವಿವಾಹಿತ ಯುವಕ.

ಬಿಜಾಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈತ ಇತ್ತೀಚಿಗೆ ಮಾನಸಿಕವಾಗಿ ಖಿನ್ನತೆಯಿಂದ ಇದ್ದ ಎಂದು ಹೇಳಲಾಗಿದ್ದು, ಫೆ.17 ರಂದು ಶುಕ್ರವಾರ ಮನೆಯಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದ ಎಂದು ಮನೆಯವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಆನಾರೋಗ್ಯದಿಂದ ಇದ್ದ ಈತ ಔಷಧ ಪಡೆಯುತ್ತಿದ್ದನು. ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಈತ ಕೂಲಿಯನ್ನು ಅರಸಿಕೊಂಡು ದ.ಕ.ಜಿಲ್ಲೆಗೆ ಬಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!