May 11, 2026

ಕುಂದಾಪುರ: ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಇಬ್ಬರ ಬಂಧನ, ಕೋಳಿಗಳು, ನಗದು ವಶ

0
IMG-20230219-WA0002.jpg

ಕುಂದಾಪುರ: ಕೋಳಿ ಅಂಕ, ಜುಗಾರಿ ಆಡುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ತಲ್ಲೂರ್ ನೆಟ್ಟಿಬೈಲಿನ ಮಂಜುನಾಥ್ (31) ಹಾಗೂ ಆನಗಳ್ಳಿ ಗಾಣಿಗರ ಬೆಟ್ಟುವಿನ ಆದಿತ್ಯ (25) ಬಂಧಿತರು.

ಇನ್ನು ಕೆಲವರು ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದು, ಬಂಧಿತರಿಂದ 8000 ರೂ. ಮೌಲ್ಯದ ಹುಂಜ ಕೋಳಿಗಳು, 2 ಬಾಳು, 900 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!