May 14, 2026

ಮಂಗಳೂರು: ಡಿಜಿಟಲ್ ಮಾರ್ಕೆಟಿಂಗ್ ಮೂಲಕ 18.43 ಲಕ್ಷ ರೂ. ವಂಚನೆ: ಸೆನ್‌ ಠಾಣೆಯಲ್ಲಿ ದೂರು ದಾಖಲು

0
IMG-20230217-WA0020.jpg

ಮಂಗಳೂರು: ಡಿಜಿಟಲ್ ಮಾರ್ಕೆಟಿಂಗ್ ಮೂಲಕ ತ್ವರಿತ ಹಣ ಗಳಿಸುವ ಆಮಿಷದ ಬಲೆಗೆ ಬಿದ್ದ ವ್ಯಕ್ತಿ 18.43 ಲಕ್ಷ ರೂ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

2022 ಡಿ.14ರಂದು ಡಿಜಿಟಲ್‌ ಮಾರ್ಕೆಟಿಂಗ್‌ ಮೂಲಕ ಹಣಗಳಿಸುವ ಬಗ್ಗೆ ಅಪರಿಚಿತ ವ್ಯಕ್ತಿಯ ಸಂದೇಶ ವಾಟ್ಸಾಪ್‌ ಸಂದೇಶವನ್ನು ನಂಬಿದ ಅವರು ಅಪರಿಚಿತ ಕಳುಹಿಸಿದ್ದ ಟೆಲಿಗ್ರಾಂ ಚಾನಲ್‌ಗೆ ಸದಸ್ಯರಾಗಿದ್ದಾರೆ. ಆ ಚಾನೆಲ್‌ ಮೂಲಕ ವೆಬ್‌ಸೈಟ್‌ ಒಂದರಲ್ಲಿ ನೊಂದಣಿ ಮಾಡುವಂತೆ ತಿಳಿಸಿದ್ದು, ನೋಂದಣಿ ಮಾಡಿಸಿಕೊಂಡಿದ್ದಾರೆ. ಬಳಿಕ ಡಿ.18ರಂದು 9 ಸಾವಿರ ರೂ. ಪ್ರಥಮವಾಗಿ ತಮ್ಮ ಬ್ಯಾಂಕ್‌ ಖಾತೆಯಿಂದ ಪಾವತಿಸಿದ್ದು, ಈ ಹಣವು ವಾಪಾಸು ಬಂದಿದೆ.

ಅನಂತರ ಹಂತ ಹಂತವಾಗಿ ಹಣ ಕಳುಹಿಸುವಂತೆ ಅಪರಿಚಿತ ವ್ಯಕ್ತಿ ತಿಳಿಸಿದ್ದು, ಅವರು ಕಳುಹಿಸಿದ ಹಣ ವೆಬ್‌ಸೈಟ್‌ ಖಾತೆಯಲ್ಲಿ ದ್ವಿಗುಣಗೊಂಡಿರುವಂತೆ ಕಾಣಿಸುತ್ತಿತ್ತು. ಅದನ್ನು ನಂಬಿದ ಅವರು ಹೆಚ್ಚಿನ ಲಾಭ ಗಳಿಸುವ ಆಸೆಯಿಂದ ಒಟ್ಟು 18,43,000 ರೂ. ಹಂತ ಹಂತವಾಗಿ ಕಳುಹಿಸಿದ್ದಾರೆ. ಕೊನೆಗೆ ತಾನು ಹೂಡಿಕೆ ಮಾಡಿದ ಹಣ ಹಿಂಪಡೆಯಲು ಪ್ರಯತ್ನಿಸಿದಲ್ಲಿ ಪುನಃ ಹಣ ಪಾವತಿಸುವಂತೆ ಅಪರಿಚಿತ ವ್ಯಕ್ತಿ ತಿಳಿಸಿದ್ದಾನೆ. ಬಳಿಕ ಹೂಡಿಕೆ ಮಾಡದಿದ್ದರೂ, ಈವರೆಗೆ ಹಣ ಮರುಪಾವತಿ ಆಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!