March 21, 2026

ಪುತ್ತೂರು: 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ಅನ್ವರ್ ಪೊಲೀಸರ ವಶಕ್ಕೆ

0
IMG-20230217-WA0019.jpg

ಪುತ್ತೂರು: ವಾರಂಟ್ ಜಾರಿಯಾಗಿದ್ದರೂ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಆರೋಪಿಯನ್ನು ವಿಟ್ಲದ ಕಸಬಾ ಗ್ರಾಮದ ನಿವಾಸಿ ಮೊಹಮ್ಮದ್ಅನ್ವರ್ ಎಂದು ಗುರುತಿಸಲಾಗಿದೆ.

ಈತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಾರಂಟ್ ಜಾರಿಯಾಗಿದ್ದರೂ ಕಳೆದ 5 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಇದೀಗ ಪುತ್ತೂರು ಠಾಣಾ ಪೊಲೀಸ್ ನೀರಿಕ್ಷಕರು ಮತ್ತು ಉಪ ನೀರಿಕ್ಷಕರ ಮಾರ್ಗದರ್ಶನದಲ್ಲಿ ಎಚ್‌ಸಿ ಪರಮೇಶ್ ಮತ್ತು ಎಚ್‌ಸಿ ಉದಯ ಮತ್ತು ಪಿ ಸಿ ಗಿರಿಪ್ರಶಾಂತ್ ರವರು ದಸ್ತಗಿರಿ‌ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!