May 11, 2026

ವಿಟ್ಲ: ಫೆ.15ರಂದು ಕನ್ಯಾನ ಚೆಡವು ದುಲ್-ಫುಖಾರ್ ಸೇವಾ ಟ್ರಸ್ಟ್ ವತಿಯಿಂದ 23ನೇ ವಾರ್ಷಿಕ ಮಹಾ ಸಮ್ಮೇಳನ

0
IMG-20230213-WA0013.jpg

ವಿಟ್ಲ: ಕನ್ಯಾನ ಚೆಡವು ದುಲ್-ಫುಖಾರ್ ಸೇವಾ ಟ್ರಸ್ಟ್ ಇದರ ವತಿಯಿಂದ (ಬಡ ಮತ್ತು ಅನಾಥ ಮಕ್ಕಳ ಸಹಾಯಾರ್ಥವಾಗಿ) 23ನೇ ವಾರ್ಷಿಕ ಮಹಾ ಸಮ್ಮೇಳನ ಇದೇ 15ರ ಬುಧವಾರ ಕನ್ಯಾನ ರಹ್ಮಾನೀಯ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಕನ್ಯಾನ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುವಾಃ ನೇತೃತ್ವ ನೀಡಲಿದ್ದಾರೆ. ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಕೆ.ಎಂ ಇಬ್ರಾಹಿಂ ಫೈಝಿ ಕನ್ಯಾನ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಶ್ರಫ್ ಮದನಿ ಚೆಂಬರ್ಪು ಸ್ವಾಗತಿಸಲಿದ್ದಾರೆ. ಅಸ್ಸಯ್ಯಿದ್ ಬದ್ರುಸ್ಸಾದಾತ್ ಇಬ್ರಾಹೀಮುಲ್ ಖಲೀಲ್ ತಂಙಳ್ ಅಲ್ ಬುಖಾರಿ ಕಡಲುಂಡಿ
ಮುಖ್ಯ ಪ್ರಭಾಷಣ ಮಾಡಲಿದ್ದು, ಜಬ್ಬಾರ್ ಸಖಾಫಿ ಪಾತೂರು ಮಾತನಾಡಲಿದ್ದಾರೆ. ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಮಹಮೂದುಲ್ ಫೈಝಿ ವಾಲೆಮುಂಡೋವ್ ಉಸ್ತಾದ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!