February 3, 2026

ಟರ್ಕಿ, ಸಿರಿಯಾ ಭೂಕಂಪ ಸಂಭವಿಸಿದ 140 ಗಂಟೆಗಳ ಬಳಿಕ ಹಮ್ಜಾ ಎಂಬ 7 ತಿಂಗಳ ಮಗುವಿನ ರಕ್ಷಣೆ

0
image_editor_output_image-96379060-1676174945277.jpg

ಕಹ್ರಮನ್ಮರಸ್‌: ಪ್ರಬಲ ಭೂಕಂಪ ಸಂಭವಿಸಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಮೃತಪಟ್ಟವರ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ.

ಭಾನುವಾರ 2 ತಿಂಗಳ ಮಗು, 7 ತಿಂಗಳ ಮಗು, ಹಾಗೂ 13 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

ಭೂಕಂಪ ಸಂಭವಿಸಿದ 140 ಗಂಟೆಗಳ ಬಳಿಕ ಹಮ್ಜಾ ಎಂಬ 7 ತಿಂಗಳ ಮಗುವನ್ನು ಇಲ್ಲಿನ ಹಟೇಯಲ್ಲಿ ರಕ್ಷಿಸಲಾಗಿದೆ. 13 ವರ್ಷದ ಎಸ್ಮಾ ಸುಲ್ತಾನ್ ಎಂಬ ಬಾಲಕಿಯನ್ನು ಗಾಜಿಯಾಟೆಪ್‌ನಲ್ಲಿ ರಕ್ಷಣೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭೂಕಂಪನದಿಂದ ಹಾನಿಗೊಳಗಾದ ಪ್ರದೇಶದ ಅವಶೇಷಗಳಡಿಯಿಂದ ಭಾನುವಾರ ಬೆಳಗ್ಗೆಯೂ ಮಕ್ಕಳನ್ನು ಹೊರ ತರಲಾಗಿದ್ದು, ರಕ್ಷಣಾ ಕಾರ್ಯಕ್ಕೆ ಆಶಾಕಿರಣವಾಗಿ ಪರಿಣಮಿಸಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಅವಶೇಷಗಳಡಿಯಲ್ಲಿ ಬದುಕುಳಿದವರ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!