February 3, 2026

ಕಾಸರಗೋಡು: ಚೂಡಿದಾರ್‌ನ ಶಾಲ್ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತ್ಯು: ಹುಟ್ಟು ಹಬ್ಬದಂದೇ ಕೊನೆಯುಸಿರೆಳೆದ ಮಹಿಳೆ

0
20230211_164957.jpg

ಕಾಸರಗೋಡು: ಮಂಜೇಶ್ವರ ತೂಮಿನಾಡಿನಲ್ಲಿ ಮಹಿಳೆಯೊಬ್ಬರುಹುಟ್ಟು ಹಬ್ಬದ ದಿನದಂದೇ ಚೂಡಿದಾರ್‌ನ ಶಾಲ್ ಯಂತ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ತೂಮಿನಾಡಿನ ರಂಜನ್ ಎಂಬವರ ಪತ್ನಿ ಜಯಶೀಲ (22) ಮೃತಪಟ್ಟವರು.

ತೂಮಿನಾಡುನಲ್ಲಿರುವ ಬೇಕರಿಯೊಂದರ ಕಾರ್ಮಿಕೆಯಾಗಿದ್ದು, ಎಂದಿನಂತೆ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಯಂತ್ರಕ್ಕೆ ಚೂಡಿಧಾರ್ ಶಾಲು ಸಿಲುಕಿ ದುರ್ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಜಯಶೀಲರನ್ನು ಅಲ್ಲಿದ್ದವರು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಇಂದು ಜಯಶೀಲರ ಹುಟ್ಟು ಹಬ್ಬವಾಗಿದ್ದು, ಇದರ ನಡುವೆ ಧಾರುಣ ಘಟನೆ ನಡೆದಿದೆ.

ಇನ್ನು ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!