February 1, 2026

ಉಪ್ಪಿನಂಗಡಿ: ದ್ವಿಚಕ್ರ ವಾಹನ ಅಪಘಾತ: ಗಂಭೀರ ಗಾಯಗೊಂಡಿದ್ದ ಬಾಲಕ ಮೃತ್ಯು

0
image_editor_output_image-1824084862-1676087432926.jpg

ಉಪ್ಪಿನಂಗಡಿ: ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನೋರ್ವ ಚಿಕಿತ್ಸೆ ಫ‌ಲಕಾರಿಯಾಗದೆ ಗುರುವಾರ ತಡರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮೃತನನ್ನು ಕುಪ್ಪೆಟ್ಟಿ ನಿವಾಸಿ ಕೂಲಿ ಕಾರ್ಮಿಕ ಇಬ್ರಾಹಿಂ ಯಾನೆ ಅಬ್ಬೊನು ಅವರ ಪುತ್ರ ಅಬೂಬಕ್ಕರ್‌ ಸಿದ್ದಿಕ್‌ (16) ಎಂದು ಗುರುತಿಸಲಾಗಿದೆ.

ಸಿದ್ದಿಕ್‌ ತನ್ನ ಸ್ನೇಹಿತ ಮುಹಮ್ಮದ್‌ ಕಲೀಲ್‌ನೊಂದಿಗೆ ದ್ವಿಚಕ್ರ ವಾಹನದಲ್ಲಿ ಕರಾಯ ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಹೋಗುತ್ತಿದ್ದ ಸಂದರ್ಭ ಶಿವಗಿರಿ ಬಳಿ ಗೂಡ್ಸ್‌ ರಿಕ್ಷಾ ದ ಹಿಂಬದಿಗೆ ಇವರ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿತ್ತು.

Leave a Reply

Your email address will not be published. Required fields are marked *

error: Content is protected !!