December 18, 2025

ಪುತ್ತೂರು: ಕೇರಳಕ್ಕೆ ಶ್ರೀಗಂಧನ ಎಣ್ಣೆ ಸಾಗಾಟ ಪ್ರಕರಣ:
16 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯ ಬಂಧನ

0
image_editor_output_image2004730201-1637222652054

ಪುತ್ತೂರು: ಕೇರಳಕ್ಕೆ ಶ್ರೀಗಂಧನ ಎಣ್ಣೆ ಸಾಗಾಟ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಕೊಲ್ಲಂಬಡಿ ನಿವಾಸಿ ಮಹಮ್ಮದ್ ರಫೀಕ್.ಎಮ್.ಎಮ್ ಬಂಧಿತ ಆರೋಪಿ.

2006ರಲ್ಲಿ ಪುತ್ತೂರಿನಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸುಮಾರು 2 ಲೀಟರ್ ಶ್ರೀಗಂಧದ ಎಣ್ಣೆಯನ್ನು ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡ ನಂತರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡಿದ್ದು ಈತನ ಪತ್ತೆ ಬಗ್ಗೆ ನ್ಯಾಯಾಲಯವು ದಸ್ತಗಿರಿ ವಾರೆಂಟ್ ನ್ನು ಹೊರಡಿಸಿತ್ತು. ಇದೀಗ ಪೊಲೀಸರ ತಂಡ ಕೇರಳದಲ್ಲಿ ಬಂಧಿಸಿದ್ದಾರೆ.

ಡಾ| ಗಾನಾ ಪಿ. ಕುಮಾರ್, ಪೊಲೀಸ್ ಉಪಾಧೀಕ್ಷಕರು ಪುತ್ತೂರು ಉಪ ವಿಭಾಗರವರು ಹಾಗೂ ಉಮೇಶ್ ಉಪ್ಪಳಿಕೆ, ವೃತ್ತ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ರವರ ಮಾರ್ಗದರ್ಶನದಂತೆ ಠಾಣಾ ಉಪನಿರೀಕ್ಷಕರುಗಳಾದ ಉದಯರವಿ.ಎಂ.ವೈ, ಮತ್ತು ಅಮೀನಸಾಬ ಎಮ್ ಅತ್ತಾರ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ ಅದ್ರಾಮ್, ಮತ್ತು ಪ್ರವೀಣ್ ರೈ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!