ಬಸ್, ಕಾರು ಅಪಘಾತ: 30 ಮಂದಿ ಸಾವು, 15 ಮಂದಿ ಗಾಯ
ಇಸ್ಲಾಮಾಬಾದ್: ಪ್ರಯಾಣಿಕರಿದ್ದ ಬಸ್ ಮತ್ತು ಕಾರು ಆಳವಾದ ಕಂದರಕ್ಕೆ ಉರುಳಿ ಬಿದ್ದ ಪರಿಣಾಮ 30 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ದಾರುಣ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಇಲ್ಲಿನ ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ ಜಿಲ್ಲೆಯ ಕಾರಕೋರಂ ಹೆದ್ದಾರಿಯಲ್ಲಿ ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ನಂತರ ಕಂದರಕ್ಕೆ ಉರುಳಿ ಬಿದ್ದಿವೆ.
ಬಸ್ ಗಿಲ್ಗಿಟ್‌ನಿಂದ ರಾವಲ್ಪಿಂಡಿಗೆ ಹೋಗುತ್ತಿದ್ದಾಗ ಶಿಥಿಯಾಲ್ ಪ್ರದೇಶದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ




