May 14, 2026

ಉಳ್ಳಾಲ: ಫೆ. 9 ರಂದು ನಾಟೆಕಲ್ ನಲ್ಲಿ ಉಳ್ಳಾಲ ವನ್ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ

0
IMG-20230207-WA0031.jpg

ಉಳ್ಳಾಲ ತಾಲೂಕು ನಾಟೆಕಲ್ ನಲ್ಲಿರುವ ಉಳ್ಳಾಲ ತಾಲೂಕು ಕಚೇರಿ ಮುಂಭಾಗದಲ್ಲಿ ಉಳ್ಳಾಲ ವನ್‌ ಡಿಜಿಟಲ್‌ ಸೇವಾ ಕೇಂದ್ರ‌ ಫೆ. 9 ರಂದು ಉದ್ಘಾಟನೆಗೊಳ್ಳಲಿದೆ.

ಉದ್ಘಾಟನೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ‌ ಶಾಸಕ ಯು.ಟಿ. ಖಾದರ್‌ ನೆರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಹಿದಾಯ ಫೌಂಡೇಶನ್ ಮಂಗಳೂರು ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ವಹಿಸಲಿದ್ದಾರೆ. ಅಬೂಬಕರ್‌ ಮುಸ್ಲಿಯಾರ್ ಕುಕ್ಕಾಜೆ ದುವಾ ನೆರವೇರಿಸಲಿದ್ದಾರೆ‌.

ಉಳ್ಳಾಲ ವನ್ ಡಿಜಿಟಲ್ ಸೇವಾ ಕೇಂದ್ರದಲ್ಲಿ ಇ-ಸ್ಟಾಂಪ್, ಪಾಸ್ಪೋರ್ಟ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ವಾಹನ ಇನ್ಶೂರೆನ್ಸ್, ಮ್ಯಾರೇಜ್ ಸರ್ಟಿಫಿಕೇಟ್, ಅಟ್ಟೆಸ್ಟೇಶನ್, ಟೈಪಿಂಗ್, ವೋಟರ್ ಐಡಿ, ಪಡಿತರ ಚೀಟಿ, ಆರ್.ಟಿ.ಸಿ., ಸೇರಿದಂತೆ ಹಲವು ಆನ್ ಲೈನ್ ಸೇವೆಗಳು ಲಭ್ಯವಿರುತ್ತದೆ ಎಂದು ಉಳ್ಳಾಲ ವನ್ ಪಾಲುದಾರರಾದ ಶೌಕತ್ ಅಲಿ ಬಂಟ್ವಾಳ ಹಾಗೂ ಆಶಿಕ್ ಕುಕ್ಕಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!