ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 4,000ಕ್ಕೆ ಏರಿಕೆ,
ಟರ್ಕಿ: ಟರ್ಕಿ ಮತ್ತು ಸಿರಿಯಾದಲ್ಲಿ ನಿನ್ನೆ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 4,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ರಕ್ಷಕರು ಬದುಕುಳಿದವರಿಗಾಗಿ ಬರಿ ಕೈಗಳಿಂದ ನೆಲವನ್ನು ಅಗೆಯುತ್ತಿರುವಾಗಲೇ ಕಣ್ಣೆದುರೇ ಸಾವಿರಾರು ಕಟ್ಟಡಗಳು ಧರೆಗುರುಳಿವೆ.
ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ ಟರ್ಕಿಯಲ್ಲಿ ಸಂಭವಿುಸಿ ಅಪಾರ ಸಾವು-ನೋವುಗಳುಂಟಾದಾಗ ಡಜನ್‌ಗಟ್ಟಲೆ ರಾಷ್ಟ್ರಗಳು ಸಹಾಯವನ್ನು ವಾಗ್ದಾನ ಮಾಡಿದವು, ಟರ್ಕಿಯ ಸ್ಥಳೀಯ ಕಾಲಮಾನ ಪ್ರಕಾರ ನಸುಕಿನ ಜಾವ 4 ಗಂಟೆಯ ಸುಮಾರಿಗೆ ಮೊದಲ ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ಇನ್ನೂ ಸವಿ ನಿದ್ರಿಸುತ್ತಿದ್ದರಿಂದ ಸಾವುನೋವಿನ ಸಂಖ್ಯೆ ಹೆಚ್ಚಾಗಿದೆ. ತೀವ್ರ ದಟ್ಟ ಮಂಜಿನ ಹವಾಮಾನ ತುರ್ತು ರಕ್ಷಣಾ ಕಾರ್ಯಗಳಿಗೆ ಅಡಚಣೆಯುಂಟುಮಾಡಿತು.
ನಿವಾಸಿಗಳಿಂದ ತುಂಬಿರುವ 5,606 ಅಪಾರ್ಟ್ ಮೆಂಟ್ ಕಟ್ಟಡಗಳಲ್ಲಿ ಅನೇಕ ಧರೆಗುರುಳಿದ್ದರೆ ಇನ್ನು ಕೆಲವು ಶಿಥಿಲಗೊಂಡಿವೆ.
ಸಿರಿಯಾದಲ್ಲಿ ಡಜನ್ಗಟ್ಟಲೆ ಕುಸಿತಗಳನ್ನು ಮತ್ತು ಅಲೆಪ್ಪೊದಲ್ಲಿನ ಪುರಾತತ್ತ್ವ ಶಾಸ್ತ್ರದ ಸ್ಥಳಗಳಿಗೆ ಹಾನಿಯನ್ನು ಉಂಟುಮಾಡಿವೆ.